ದಸರಾ ವಿಶೇಷ 2018ಸೆಲೆಬ್ರೆಟಿ ದಸರಾ

ರಾಕಿಂಗ್ ಸ್ಟಾರ್ ಯಶ್ ಕಂಡ ದಸರಾ..

ಪುಟ್ಟ ಬಾಲಕನಲ್ಲಿ ತಂದೆಯ ಬಸ್ಸನ್ನು ಅಲಂಕರಿಸಿದ ದೃಶ‍್ಯಗಳಿನ್ನೂ ಹಸಿರಾಗಿ ಉಳಿದಿದೆ..!!

                                Balkani Dasara -2018

ಯಶ್ ಅವರ ತಂದೆಯ ಹತ್ತಿರ ಬಜಾಜ್ ಸ್ಕೂಟರ್  ಇತ್ತು. ಅದರಲ್ಲಿಯೇ ಯಶ್ ದ್ವಿಚಕ್ರ ವಾಹನ  ಓಡಿಸೋದು ಕಲಿತಿದ್ದು ಕೂಡ..ಆ ಗಾಡಿ ಎಂದರೆ ರಾಕಿಂಗ್ ಸ್ಟಾರ್ ಗೆ ತುಂಬಾ ಇಷ್ಟವಂತೆ. ಯಾಕೆಂದರೆ ಅದರಲ್ಲಿ ಹಲವಾರು ನೆನಪುಗಳು ಇನ್ನೂಉಳಿದುಕೊಂಡಿವೆಯಂತೆ..!

ರಾಕಿಂಗ್ ಸ್ಟಾರ್ ಯಶ್ ಮೂಲತಃ ಮೈಸೂರಿನವರು. ಎಲ್ಲಾ ಹಬ್ಬವೂ ಯಶ್ ಗೆ ವಿಭಿನ್ನವಾಗಿರುತ್ತದೆ, ಆದರೆ ಮೈಸೂರು ದಸರಾ ಎಂದರೆ ಯಶ್ ಗೆ ತುಂಬಾ ಸ್ಪೆಷಲ್.. ಹೌದು ಯಶ್ ಹೇಳುವಂತೆ, ದಸರಾ ಹಬ್ಬ ಬಂದರೆ, ಇಡೀ ಊರಿಗೆ ಊರೇ ತಯಾರಾಗುತ್ತೆ.. ದಸರಾ ಬರುತ್ತೆ ಅಂದರೆ ಸಾಕು ಅಲ್ಲಿ ಸಂಭ್ರಮಾಚರಣೆ ಜೋರಾಗಿಯೇ ಮನೆ ಮಾಡಿರುತ್ತದೆ. ಹೀಗಾಗಿ, ಬೆಂಗಳೂರಿಗೆ ಬಂದ ಮೇಲೆ ದಸರಾ ಹಬ್ಬವನ್ನು ತುಂಬಾ ಮಿಸ್ ಮಾಡ್ತಾರೆ ಯಶ್..

Image result for yash

ಆಯುಧ ಪೂಜೆ ಎಂದರೆ ಯಶ್ ಗೆ ವಿಶೇಷ..!

ಯಶ್ ಗೆ ಆಯುಧ ಪೂಜೆ ಎಂದರೆ ಬಹಳ ಖುಷಿಯಂತೆ..!  ಅದರಲ್ಲೂ ವಾಹನಗಳಿಗೆ ಪೂಜೆ, ಅವುಗಳನ್ನು ಸಿಂಗಾರ ಮಾಡುವುದರಲ್ಲಿ ಬಹಳ ಾನಂದ ಸಿಗುತ್ತಂತೆ..! ಇನ್ನು ವಿಶೇಷವಾಗಿ,  ಯಶ್ ತಂದೆ ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಆದ ಕಾರಣ,  ಅವರ ತಂದೆ ಅವರು ಓಡಿಸುತ್ತಿದ್ದ ಬಸ್ಸನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರಂತೆ. ಬಸ್ ಡಿಪೊದಲ್ಲಿ ಬಸ್ಸು ಸಾಲಾಗಿ ನಿಲ್ಲಿಸುತ್ತಿದ್ದರು.. ಆಯುಧ ಪೂಜೆ ಬಂದಾಗ ಇವರ ತಂದೆ ಶ್ರದ್ಧೆಯಿಂದ  ಅವರ ಬಸ್ಸಿಗೆ ಹೂವಿನ ಅಲಂಕಾರ ಮಾಡುವುದೇ ನೋಡಲು ವಿಶೇಷವಂತೆ.. ಪ್ರತಿ ವರ್ಷ ಆಯುಧ ಪೂಜೆಗೆ ಹೊಸ ಹೊಸ ಥೀಮ್  ಹುಡುಕುತ್ತಿದ್ದರಂತೆ.

ಅವರ ಸಹೋದ್ಯೋಗಿಗಳ ನಡುವೆ ಅದ್ಯಾರ ಬಸ್ಸು ಬಹಳ ಶ್ರೇಷ್ಠವಾಗಿ ಅಲಂಕೃತಗೊಂಡಿದೆ ಎಂಬುದನ್ನೂ ನಿರ್ಣಯಿಸಿ  ಅವರವರ  ಮಧ್ಯೆ ಸ್ಪರ್ಧೆಯೂ ನಡೆಯುತ್ತಿತ್ತಂತೆ..! ಯಶ್ ಚಿಕ್ಕವರಿದ್ದಾಗ ವಾಹನ ಪೂಜೆ ಮಾಡುವ ಸಮಯದಲ್ಲಿ ಅಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಹೆಮ್ಮೆ ಪಡುತ್ತಿದ್ದರಂತೆ..!

Image result for yash bike

ಯಶ್ ಗೆ ಮೆಚ್ಚಿನ ವಾಹನ ಯಾವುದು?

ಯಶ್ ಅವರ ತಂದೆಯ ಹತ್ತಿರ ಬಜಾಜ್ ಸ್ಕೂಟರ್  ಇತ್ತು. ಅದರಲ್ಲಿಯೇ ಯಶ್ ದ್ವಿಚಕ್ರ ವಾಹನ  ಓಡಿಸೋದು ಕಲಿತಿದ್ದು ಕೂಡ..ಆ ಗಾಡಿ ಎಂದರೆ ರಾಕಿಂಗ್ ಸ್ಟಾರ್ ಗೆ ತುಂಬಾ ಇಷ್ಟವಂತೆ. ಯಾಕೆಂದರೆ ಅದರಲ್ಲಿ ಹಲವಾರು ನೆನಪುಗಳು ಉಳಿದುಕೊಂಡಿವೆಯಂತೆ.. ಅಂಗಡಿಯಿಂದ ದಿನಸಿ ತರಬೇಕಾದಾಗ ಸ್ವತಃ ಯಶ್ ಅವರೇ ಗಾಡಿಯಲ್ಲಿ ದಿನಸಿಗಳನ್ನು ಮುಂದೆ ಇರಿಸಿಕೊಂಡು ಬರುತ್ತಿದ್ದರಂತೆ. ಆನಂತರ ದುಡಿಯಲು ಶುರುಹಚ್ಚಿಕೊಂಡ ಮೇಲೂ  ಒಂದೆರಡು ಬಾರಿ ಬಸ್ಸಿನಲ್ಲಿ ಪ್ರಯಾಣಿಸಿದ್ದುಂಟಂತೆ. ಆನಂತರ ಻ವರ ದುಡಿಮೆಯ ಹಣದಲ್ಲೇ  ಖರೀದಿಸಿದ  ಮೊದಲ ಬೈಕ್, ಸಿಬಿಝೀ  ಬೈಕ್..!  ಅದರ ಮೇಲೆ ಯಶ್ ಗೆ ಆಗ ಪಂಚಪ್ರಾಣ  ಅಂತೆ..! ಆನಂತರದ ದಿನಗಳಲ್ಲಿ ಕಾರು ಕೊಂಡ ಮೇಲಂತೂ ಬೈಕನ್ನು ಹಾಗೇ ಉಳಿಸಿಕೊಂಡಿದ್ದಾರಂತೆ!

Image result for yash car

ಯಶ್ ಮೊದಲು ಖರೀದಿಸಿದ ವಾಹನ..?

‘ನಂದಗೋಕುಲ’ ಧಾರಾವಾಹಿಯಲ್ಲಿ ನಟಿಸುವ ಸಮಯದಲ್ಲಿ ತಮ್ಮ  ಸ್ವಂತ ದುಡಿಮೆಯಿಂದ ‘ಸಿಬಿಜೆಡ್’ ಬೈಕನ್ನು ಖರೀದಿಸಿದ್ದರಂತೆ ಯಶ್! ಧಾರಾವಾಹಿ ಸಮಯದಲ್ಲಿ ಎರಡು ಭಾರಿ ಬಸ್ಸಿನಲ್ಲಿ ಪ್ರಯಾಣಿಸಿದ್ದರು..ಆಗ ಯಾರೋ ಯಶ್ ರನ್ನು ಗುರುತಿಸಿದ್ದರು ಕೂಡ. ಆಗ ತಾನೇ ಅದರ ಪ್ರೋಮೋ ಬರಲು ಶುರುವಾಗುತ್ತಿತ್ತಂತೆ. ಅದಕ್ಕೆ ಹೆಚ್ಚಾಗಿ ಆಲೋಚಿಸಿ ಯಶ್.. ಮುಂದೆ ತಮ್ಮ ಸ್ವಂತ ದುಡ್ಡಿನಲ್ಲೇ ವಾಹನ ಖರೀದಿ ಮಾಡಬೇಕು ಎಂಬ ಹಠ ಇದ್ದುರಿಂದ ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು.

ಯಶ್ ಮನೆಯಲ್ಲಿ ಎಷ್ಟು ವಾಹನಗಳಿವೆ?

ಈಗಂತೂ ಯಶ್ ಮನೆಯಲ್ಲಿ 5 ರಿಂದ 6 ಕಾರುಗಳೂ, 7-8  ದ್ವಿಚಕ್ರ ವಾಹನವೆಲ್ಲಾ ಸೇರಿ 12-14 ವಾಹನಗಳಿವೆಯಂತೆ..! ಆದರೂ, 15 ವರ್ಷ ಹಿಂದೆ ಹಾಗೂ ಪ್ರಸ್ತುತ ಆಯುಧ ಪೂಜೆ ಮಾಡುವುದರಲ್ಲಿ ಏನೂ ವ್ಯತ್ಯಾಸವಾಗಿಲ್ಲ ಯಶ್ ಗೆ..! ಯಾಕೆಂದರೆ ಅಂದಿನ ಖುಷಿ ಅಂದಿಗಿತ್ತು, ಎಂಬುದು ಇವರ ಬಲವಾದ ನಂಬಿಕೆ. ಚಿಕ್ಕ ವಯಸ್ಸಿನಲ್ಲಿ ಬೇರೆ ಹೊಸ ಹೊಸ ಬೈಕ್ ಗಳನ್ನು ನೋಡುವಾಗ ಯಶ್ ಗೂ ಅಂತಹದ್ದೇ ಬೇಕು ಎಂದು ಅನ್ನಿಸಿದ್ದು ಸತ್ಯ. ಆದರೀಗ  ಸಕಲ ಸಂಪತ್ತುಗಳಿರುವಾಗ, ಪದಾರ್ಥಗಳ ಮೌಲ್ಯ ಕಳೆದುಕೊಂಡಿವೆಯಂತೆ. ಏನೇ ಇರಲಿ, ಯಶ್ ತಾವು ಓಡಾಡುವ ಗಾಡಿಗೆ ಅಷ್ಟೇ ಗೌರವ ಕೊಡುತ್ತಾರೆ, ಇದೇ ಆಯುಧ ಪೂಜೆಯ ವಿಶೇಷ…, ರಾಕಿಂಗ್ ಸ್ಟಾರ್ ಯಶ್ ಗೆ…!!

ನಿಜಕ್ಕೂ ಯಶ್ ತಮ್ಮ ಬಾಲ್ಯದ ಬಡತನ ನೆನಪಿಸಿಕೊಳ್ಳುವಾಗ  ಇಂದಿನ ಅತಿಯಾದ ಶ್ರೀಮಂತಿಕೆ ಒಮ್ಮೆಯೂ ಅಡ್ಡಿಬಂದು ಮುಜುಗರ ಮಾಡುತ್ತಿಲ್ಲ.  ಅದೇ ವೇಳೆ  ತಮ್ಮ ಶ್ರೀಮಂತಿಕೆಯ ಕುರಿತು ಹೇಳಿಕೊಳ್ಳುವಾಗ ತುಸು ಮೆಲುದನಿಗೆ ಜಾರುವ ಯಶ್ ಸೌಜನ್ಯ-ಸಂಕೋಚದ ಮುದ್ದೆಯಾಗುತ್ತಾ ಅಪ್ಪಟ ಮಾನವೀಯತೆಯನ್ನು ಮೆರೆಯುತ್ತಾರೆ.

Tags

Related Articles