ಸುದ್ದಿಗಳು

ನಮ್ಮನ್ನು ಬೇರ್ಪಡಿಸುವ ಹಲವರ ಪ್ರಯತ್ನ ಕೈ ಗೂಡಲಿಲ್ಲ ಅಂದ್ರು ರಜನಿಕಾಂತ್

ನನಗೆ ಕಮಲ್ ಸಹಾಯ ಮಾಡಿದ್ದಾನೆ

ಚೆನ್ನೈ,ಡಿ.2: ಬಹುನಿರೀಕ್ಷಿತ 2.0 ಯಶಸ್ಸಿನಿಂದ ಹಿಗ್ಗುತ್ತಿರುವ ನಟ ರಜನಿಕಾಂತ್, ತಾವು ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಶಂಕರ್ ನಿರ್ದೇಶನದ 450 ಕೋಟಿ ರೂಪಾಯಿ ಬಜೆಟ್ ನ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಈಗಾಗಲೇ ಬಾಕ್ಸ್ ಅಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುವತ್ತ ಚಿತ್ರ ಸಾಗಿದೆ. ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ನಟ ರಜನಿಕಾಂತ್, 2.0 ಚಿತ್ರವನ್ನು ಜನ ಮೆಚ್ಚಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Related image

ಕಮಲ್ ಹಾಸನ್ ಹಾಗೂ ತಮ್ಮ ನಡುವಿನ ಬಾಂಧವ್ಯ ಬಿಡಿಸಿಟ್ಟ ರಜನಿಕಾಂತ್

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ನಿಮಗೆ ಪ್ರೋಫೆಷನ್ ಹಾಗೂ ರಾಜಕೀಯವಾಗಿ ಶತ್ರವಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಟ ರಜನಿಕಾಂತ್. ಆತನ ನನ್ನ ವಿರೋಧಿ ಎಂಬುದು ಸುಳ್ಳು. ಕಮಲ್ ಹಾಸನ್ ನನ್ನ ಅತ್ಯುತ್ತಮ ಗೆಳೆಯ. ನನ್ನನ್ನು ಹಾಗೂ ಆತನನ್ನು  ಬೇರ್ಪಡಿಸಲು ಸಾಕಷ್ಟು ಮಂದಿ ಯತ್ನಿಸಿದ್ದಾರೆ. ಆದರೆ ಅಂತವರ ಪ್ರಯತ್ನ ಫಲ ನೀಡಿಲ್ಲ. ನಮ್ಮ ಗೆಳೆತನ ಅತ್ಯತ್ತಮವಾಗಿ ಮುಂದುವರೆದಿದೆ. ಚಿತ್ರರಂಗದಲ್ಲಿ ನನಗೆ ಕಮಲ್ ಹಾಸನ್ ಸಿಕ್ಕಾಪಟ್ಟೆ ಸಹಾಯ ಮಾಡಿದ್ದಾರೆ. ಡೈಲಾಗ್ ವಿಚಾರದಲ್ಲಿ ನನಗೆ ಕಮಲ್ ಸಹಾಯ ಮಾಡಿದ್ದಾನೆ. ವೈಯಕ್ತಿಕವಾಗಿ ಆತ ಸಿಕ್ಕಾಪಟ್ಟೆ ಒಳ್ಳೆ ವ್ಯಕ್ತಿ. ನನಗಾಗಿ ಆತನ ಬ್ಯುಸಿ ಶೆಡ್ಯೂಲ್ ಗಳ ನಡುವೆಯೂ ಸಮಯ ನೀಡಿದ್ದಾನೆ. ನಾವಿಬ್ಬರು ರಾಜಕೀಯ, ಸಿನಿಮಾ ಹೀಗೆ ಎಲ್ಲಾ ವಿಚಾರಗಳ ಕುರಿತಂತೆಯೂ ಚರ್ಚೆ ನಡೆಸುತ್ತಲೇ ಇರುತ್ತೇವೆ ಎಂದಿದ್ದಾರೆ ರಜನಿಕಾಂತ್.

ಇದೇ ವೇಳೆ ಶಬರಿಮಲೆ ವಿವಾದ ಕುರಿತಂತೆ ನೇರವಾಗಿ ಉತ್ತರಿಸಿದ ರಜನಿಕಾಂತ್, ಕೆಲವೊಂದು ದೇವಾಲಯಗಳು ಹಾಗೂ ಸಂಪ್ರದಾಯಗಳ ಬಗ್ಗೆ ಯಾರೂ ಮಧ್ಯಪ್ರವೇಶಿಸುವಂತಿಲ್ಲ. ನ್ಯಾಯಾಲಯ ಕೂಡ ಎಂದಿರುವ ಅವರು, ದೇವಾಲಯ ವಿಚಾರದಲ್ಲಿ ಮುಂದುವರಿದು ಬಂದಿರುವ ಸಂಪ್ರದಾಯಗಳು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಇಂತಹ ವಿಚಾರಗಳಲ್ಲಿ ಯಾವಾತ್ತೂ ಮೂಗು ತೂರಿಸಬಾರದು ಎಂದಿದ್ದಾರೆ. ರಾಜಕೀಯ ಹಾಗೂ ಧರ್ಮವನ್ನು ಯಾವತ್ತೂ ಲಿಂಕ್ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ರಜನಿಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Image result for rajinikanth

 

Tags