ಸುದ್ದಿಗಳು

ಪುನೀತ್ ಗೆ ಶೋಭಕ್ಕ ಕೊಟ್ಟ ಹೊಸ ‘ಬಿರುದು’ ಏನು?

ಬೆಂಗಳೂರು,ಆ.18: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದಲ್ಲಿ ನಿರತರಾಗಿದ್ದರೂ, ಕೊಂಚ ಬಿಡುವು ಮಾಡಿಕೊಂಡು ಇಂದು ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಭೇಟಿ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಹ ಆಗಿರುವ ಅವರು ಪುನೀತ್ ಜೊತೆಗೆ ಮೋದಿ ಸರ್ಕಾರದ ಸಾಧನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ‘ಸಂಪರ್ಕ್ ಫಾರ್ ಸಮರ್ಥನ್’ ಅಭಿಯಾನದ ವಿಚಾರವಾಗಿ ಶೋಭಾ ಕರಂದ್ಲಾಜೆ ಅವರು ಪುನೀತ್ ರನ್ನು ಭೇಟಿ ಮಾಡಿದ್ದಾರೆ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಏನೇನು ಕೆಲಸ ಮಾಡಿದೆ, ಎಷ್ಟರ ಮಟ್ಟಿಗೆ ಅಭಿವೃದ್ದಿ ಮಾಡಿದೆ ಎಂಬ ಸಾಧನೆಯ ಪುಸ್ತಕವನ್ನು ಅವರಿಗೆ ನೀಡಿದ್ದಾರೆ.

ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ”ಅಪ್ಪನಂತೆ ಮಗ…’ ‘ಸಂಪರ್ಕ್ ಫಾರ್ ಸಮರ್ಥನ್’ ವಿಷಯಕ್ಕಾಗಿ ಇಂದು ‘ಕಿಂಗ್ ಆಫ್ ಸ್ಯಾಂಡಲ್ ವುಡ್ ‘ಹಾಗೂ ಒಬ್ಬ ಒಳ್ಳೆಯ ವ್ಯಕ್ತಿ ಪುನೀತ್ ರಾಜ್ ಕುಮಾರ್ ರನ್ನು ಭೇಟಿ ಮಾಡಿದೆ. ಅವರ ಜೊತೆಗೆ ಪ್ರಧಾನಿ ಮೋದಿ ಅವರ ಸಾಧನೆಗಳ ಬಗ್ಗೆ ಚರ್ಚೆ ಮಾಡಿದೆ.” ಎಂದು ತಿಳಿಸಿದ್ದಾರೆ.

Tags

Related Articles