ಸುದ್ದಿಗಳು

ಈ ಹಿರೋಯಿನ್ ಗೆ ಡಿಮ್ಯಾಂಡಪ್ಪೋ ಡಿಮಾಂಡ್!

ಸಲ್ಮಾನ್ ಖಾನ್ ಜೊತೆ ನಟಿಸಲು 4ಕೋಟಿ ಸಂಭಾವನೆ

ಪೂಜಾ ಹೆಗ್ಡೆ ಮೂಲತಹ ಕನ್ನಡತಿಯಾದರು, ಖ್ಯಾತಿಗಳಿಸಿದ್ದು ಮಾತ್ರ ತೆಲುಗು ಹಾಗೂ ಬಾಲಿವುಡ್‌ನಲ್ಲಿ. ಈಗ ಯಾಕಪ್ಪ ಪೂಜಾ ಹೆಗ್ಡೆ ಸುದ್ದಿ ಅಂದರೆ, ತಮ್ಮ ಸ್ಟಾರ್ ಡಂ ಏರುತ್ತಿದ್ದಂತೆಯೇ ಪೂಜಾ ತಮ್ಮ ಸಂಭಾವನೆಯನ್ನು ಸಹಾ ಏರಿಸುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ನಟಿಸಲು ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಪೂಜಾ ಹೆಗ್ಡೆ.

ಇತ್ತೀಚೆಗೆ ತೆಲುಗಿನ ‘ಆಲಾ ವೈಕುಂಠ ಪುರಂಲೋ’ ಸಿನಿಮಾಗಾಗಿ ಪೂಜಾ 2 ಕೋಟಿ ರೂ.ಸಂಭಾವನೆ ಪಡೆದಿದ್ದರು. ಅಷ್ಟೇ ಅಲ್ಲದೆ, ಬಾಲಿವುಡ್‌ನಲ್ಲಿ ತೆರೆಕಂಡಿದ್ದ ‘ಹೌಸ್ ಫುಲ್ 4’ ಸಿನಿಮಾಗಾಗಿ ಸುಮಾರು 1.5ಕೋಟಿ ಸಂಭಾವನೆ ಪಡೆದಿದ್ದ ಪೂಜಾ. ಈಗ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ‌. ಸಾಜಿದ್ ನಾಡೈಡ್ ವಾಲಾ ನಿರ್ಮಾಣದ ಸಲ್ಲು ಬಾಯ್ ಅಭಿನಯದ ‘ಕಬಿ ಈದ್ ಕಬಿ ದಿವಾಲಿ’ ಸಿನಿಮಾಗಾಗಿ ಪೊಜಾ 4 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಇನ್ನೊಂದು ಸುದ್ದಿ ಏನೆಂದರೆ, ಟಾಲಿವುಡ್ ನಲ್ಲಿ ಪೂಜಾಗೆ ಬೇಡಿಕೆ ಹೆಚ್ಚಾಗಿದೆ. ಈಗ ಪೂಜಾ ತಮ್ಮ ಸಂಭಾವನೆಯನ್ನು 2 ಕೋಟಿಯಿಂದ 2.5 ಕೋಟಿ ರೂ.ವರೆಗೂ ಹೆಚ್ಚಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ನಟರ ಜೊತೆ ನಟಿಸಲು ಪೂಜಾ ಕೋಟಿಗಟ್ಟಲೆ ಹಣ ಕೇಳುತ್ತಿರುವುದು ಎಲ್ಲರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯಕ್ಕೆ ಪೂಜಾ ಸಲ್ಮಾನ್ ಜತೆ ಬಾಲಿವುಡ್‌ನಲ್ಲಿ ಹಾಗೂ ಟಾಲಿವುಡ್ ನಲ್ಲಿ ಪ್ರಭಾಸ್ ಮುಂದಿನ ಚಿತ್ರದಲ್ಲಿ ಕಾಣಿಸಿಕ್ಕೊಳ್ಳಲಿದ್ದಾರೆ.

Ajay Devgn Drops RRR Motion Poster On Gudi Padwa

Tags