ಸುದ್ದಿಗಳು

‘100’ ಹೆಸರಿನ ಚಿತ್ರದಲ್ಲಿ ರಮೇಶ್ ಅರವಿಂದ್ ಪೋಲೀಸ್…!!!

ನಟನೆ, ನಿರೂಪಣೆ, ನಿರ್ದೇಶನ.. ಹೀಗೆ ಹಲವು ವಿಭಾಗಗಳಲ್ಲಿ ತೊಡಗಿಕೊಂಡಿರುವ ರಮೇಶ್ ಅರವಿಂದ್ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಕಲಾವಿದ. ಸದ್ಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ, ಸಿನಿಮಾಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಇವುಗಳೆಲ್ಲರ ನಡುವೆ ರಮೇಶ್ ಅರವಿಂದ್ ಹೊಸ ಚಿತ್ರದ ಸಿದ್ದತೆಯಲ್ಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಹಾಗೆಯೇ ಈ ಚಿತ್ರವನ್ನು ಅವರು ನಟನೆಯೊಂದಿಗೆ ನಿರ್ದೇಶನ ಮಾಡಲಿದ್ದು, ಚಿತ್ರಕ್ಕೆ ರಚಿತಾ ರಾಮ್ ನಾಯಕಿಯೆಂದು ಹೇಳಲಾಗಿತ್ತು.

ಹೌದು, ಈ ಎಲ್ಲಾ ಸುದ್ದಿಗಳು ನಿಜವಾಗಿದ್ದು, ಇದೀಗ ಬಂದ ಮಾಹಿತಿಗಳ ಪ್ರಕಾರ, ರಮೇಶ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಲಿದ್ದಾರೆ. ಹಾಗೆಯೇ ಚಿತ್ರಕ್ಕೆ ‘100’ ಎಂಬ ಹೆಸರನ್ನೂ ಇಡಲಾಗಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ರಚಿತಾ ರಾಮ್ ರೊಂದಿಗೆ ‘ಜೋಶ್’ ಪೂರ್ಣ ಸಹ ನಟಿಸುತ್ತಿದ್ದಾರೆ. ಹಾಗೆಯೇ ಇಂದು ಈ ಚಿತ್ರಕ್ಕೆ ಮುಹೂರ್ತ ಕೂಡಾ ಆಗಿದೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಅವರು ರಮೇಶ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸದ್ಯ ರಮೇಶ್ ‘ಶಿವಾಜಿ ಸುರತ್ಕಲ್’ ಹಾಗೂ ‘ಭೈರಾದೇವಿ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಇವರ ನಿರ್ದೇಶನದ ‘ಬಟರ್ ಪ್ಲೈ’ ರಿಲೀಸ್ ಗೆ ರೆಡಿಯಾಗಿದೆ. ಈ ನಡುವೆ ‘100’ ಚಿತ್ರವು ಸಹ ಮುಹೂರ್ತ ಆಚರಿಸಿಕೊಂಡಿದೆ.

ಅಂದ ಹಾಗೆ ರಚಿತಾ ರಾಮ್ ಹಾಗೂ ರಮೇಶ್ ಅರವಿಂದ ಈ ಹಿಂದೆ ‘ಪುಷ್ಕಕ ವಿಮಾನ’ ಚಿತ್ರದಲ್ಲಿ ನಟಿಸಿದ್ದರು. ಆದರೆ, ಒಟ್ಟಿಗೆ ತೆರೆಯನ್ನು ಹಂಚಿಕೊಂಡಿರಲಿಲ್ಲ. ಇದೀಗ ಪುನಃ ಒಂದಾಗಿ, ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಮೇಶ್ ರಿಗೆ ಇಬ್ಬರು ನಾಯಕಿಯರು ಎನ್ನಬಹುದು.

ಶಾರುಖ್ ಜೊತೆ ಸನ್ನಿ 16 ವರ್ಷ ಮಾತಾಡಿಲ್ಲವಂತೆ!! ಇದಕ್ಕೆ ಕಾರಣ ಬಿಚ್ಚಿಟ್ಟ ಸನ್ನಿ!!

#100, #kannada, #filmnews, #balkaninews #filmnews, #kannadasuddigalu #ramesharavind, #poorna, #rachitharam

Tags