ಸುದ್ದಿಗಳು

ಅಪ್ಪು ಈ ಚಿತ್ರಕ್ಕೆ ಬರೋಬ್ಬರಿ 2 ವರ್ಷ !!

ಬೆಂಗಳೂರು,ಮಾ.25: ಪುನೀತ್ ರಾಜ್ ಕುಮಾರ ಅಭಿನಯದ ‘ರಾಜಕುಮಾರ’ 2 ವರ್ಷದ ಹಿಂದೆ ಬಿಡುಗಡೆಯಾಗಿ  ಚಂದನವನದಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿಸಿತ್ತು.. ಇದು ವರನಟ ರಾಜಕುಮಾರ್ ಹೆಸರಿನ ಚಿತ್ರದ ಟೈಟಲ್ಲೇ ಇರೋದು ಮತ್ತೊಂದು ವಿಶೇಷ..  ಸ್ಯಾಂಡಲ್‍ವುಡ್ ಪಾಲಿಗೆ ಅತ್ಯಂತ ವಿಶೇಷವಾದ ಚಿತ್ರ. ಪಕ್ಕಾ ಕೌಂಟುಂಬಿಕ ಹಾಗೂ ಕಮರ್ಷಿಯಲ್ ಚಿತ್ರವಾದ ‘ರಾಜಕುಮಾರ’ ಶತದಿನ ಆಚರಿಸಿತ್ತು. ಅಲ್ಲದೆ ಸ್ಯಾಂಡಲ್‍ವುಡ್‍ನ ಹಿಂದಿನ ಎಲ್ಲಾ ದಾಖಲೆಯನ್ನು ಈ ಚಿತ್ರ ಮುರಿದಿತ್ತು ಎಂಬುದು ಮತ್ತೊಂದು ವಿಶೇಷ.

Related image

ಮಾರ್ಚ್ 24 ಕ್ಕೆ ಬರೋಬ್ಬರಿ 2

ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದು, ಸಂತೋಷ್ ಆನಂದರಾಮನ್ ಚಿತ್ರವನ್ನು ಅದ್ಭುತವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕುಮಾರ 2017ರ ಚಂದನವನದ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತ್ತು.. ವಿ. ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯ. ಅದರಲ್ಲೂ ಬೊಂಬೆ ಹೇಳುತೈತೆ, ಅಪ್ಪೂ ಡ್ಯಾನ್ಸ್ ಹಾಡು ಜನರು ಗುನುಗುವಲ್ಲಿ ಯಶಸ್ವಿಯಾಗಿತ್ತು.

ಈ ಚಿತ್ರ ತೆರೆಕಂಡು ಮಾರ್ಚ್ 24 ಕ್ಕೆ ಬರೋಬ್ಬರಿ 2 ವರ್ಷ ಕಳೆದಿವೆ. ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಡೈಲಾಗ್ಸ್ಗಳು, ಪೈಟಿಂಗ್ಸ್,  ಹಾಡುಗಳು ಎಲ್ಲವೂ ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.. ಈಗ ಮತ್ತೆ ಯುವರತ್ನ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ.

ಸಂತೋಷ್ ಆನಂದರಾಮನ್ ಮಾತು

ಕನ್ನಡಿಗರಿಗೆ,ಕಲಾಬಂಧುಗಳಿಗೆ,ಕಲಾಭಿಮಾನಿಗಳಿಗೆ, ಚಿತ್ರರಂಗದ ಹಿರಿಯರಿಗೆ-ಮಿತ್ರರಿಗೆ,ಮಾಧ್ಯಮ ಮಿತ್ರರಿಗೆ, ನನ್ನ ಬೆನ್ನುತಟ್ಟಿದ ಪ್ರತಿಯೊಬ್ಬರಿಗೆ ಈ ಸಂದರ್ಭದಲ್ಲಿ ನಾನು ನನ್ನ ಶಾಷ್ಟಾಂಗ ನಮಸ್ಕಾರಗಳನ್ನ ಅರ್ಪಿಸುತ್ತಿದ್ದೇನೆ  ಜೈ ಹಿಂದ್ ಜೈ ಕರ್ನಾಟಕ ಮಾತೆ..

ನಾನು ಯಾವತ್ತು ಕಲ್ಪನಾ ಲೋಕದಲ್ಲಿ ಮುಳುಗುತ್ತೇನೋ ಅಂದು ನನ್ನ ಸೋಲು: ತಾಪ್ಸಿ ಪನ್ನು

Tags