ಸುದ್ದಿಗಳು

2019 ರಲ್ಲಿ ರಿಲೀಸ್ ಆಗಲಿರುವ ಡೇಂಜರಸ್ ಆಕ್ಷನ್ ಸಿನಿಮಾಗಳು..!

2019ರ ಬಹುನಿರೀಕ್ಷಿತ ಸಿನಿಮಾಗಳು

ಮುಂಬೈ, ಡಿ.15: 2019 ಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷಕ್ಕೆ ಸ್ವಾಗತ ಕೋರಲು ಹೊಸ ಹೊಸ ಸಿನಿಮಾಗಳು ಕೂಡಾ ರೆಡಿಯಾಗಿವೆ. 2019ರಲ್ಲಿ ಬಿಡುಗಡೆಯಾಗಲಿರುವ ಆ ಐದು ಆಕ್ಷನ್ ಚಿತ್ರಗಳು ಯಾವುದು ಗೊತ್ತೆ..? ಮುಂದೆ ಓದಿ..

ಕೇಸರಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಾಯಕ ನಟನೆಯ ‘ಕೇಸರಿ’ ಚಿತ್ರ ಸರಾಗರಿ ಯುದ್ಧ ಆಧಾರಿತ ಚಿತ್ರವಾಗಿದೆ. ಇದರಲ್ಲಿ ನಟಿ ಪರಿಣಿತಿ ಚೋಪ್ರಾ ಮತ್ತು ಭಾಗ್ಯಶ್ರೀ, ಅಕ್ಷಯ್ ಕುಮಾರ್ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2019ರ ಮಾರ್ಚ್ 22 ರಂದು ಬಿಡುಗಡೆಯಾಗಲಿದೆ. ಅನುರಾಗ್ ಕಶ್ಯಪ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಭಾರತ್

ಸಲ್ಮಾನ್ ಖಾನ್ ನಾಯಕ ನಟನೆಯ ‘ಭಾರತ್’ ಸಿನಿಮಾ ಬಹಳ ಚರ್ಚೆಯಲ್ಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಭಿನ್ನ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಸಲ್ಮಾನ್ ಖಾನ್ ಜೊತೆಗೆ ನಟಿ ಕತ್ರಿನಾ ಕೈಫ್ ಹಾಗೂ ದಿಶಾ ಪಠಾಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ರ ಈ ಹೊಸ ಚಿತ್ರವು 2019 ರ ಜುಲೈ 7 ರಂದು ಬಿಡುಗಡೆಯಾಗಲಿದೆ.ಯುಆರ್ ಎಫ್ ಅನ್ ಟೈಟಲ್ಡ್ (YRF untitled)

YRF ಸಂಸ್ಥೆ ನಿರ್ಮಾಣದ ಇನ್ನೂ ಹೆಸರಿಡದ ಹೊಸ ಚಿತ್ರ ಬಾಲಿವುಡ್ ನ ಅತ್ಯಂತ ಅಪಾಯಕಾರಿ ಆಕ್ಷನ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಇಬ್ಬರು ಬಾಲಿವುಡ್ ಸೂಪರ್ಸ್ಟಾರ್ ಗಳಾದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸಲಿದ್ದಾರೆ. ಸಿದ್ದಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 2019 ರ ಗಾಂಧಿ ಜಯಂತಿ ದಿನ ಅಂದರೆ ಅಕ್ಟೋಬರ್ 2 ರಂದು ಈ ಚಿತ್ರ  ಬಿಡುಗಡೆಯಾಗಲಿದೆ.

ಕಿಕ್ 2

ಈಗಾಗಲೇ ‘ಕಿಕ್’ ಹಿಂದಿ ಸಿನಿಮಾವನ್ನ ಸಿನಿ ಪ್ರೇಕ್ಷಕರು ಇಷ್ಟಪಟ್ಟಿದ್ದರು. ಈ ಚಿತ್ರದ ಎರಡನೆಯ ಭಾಗವು 2019 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫೆರ್ನಾಂಡಿಸ್ ಜೋಡಿ ಮತ್ತೆ ಜತೆಯಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ರ ಈ ಹೊಸ ಕಿಕ್ ಮೂವಿ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ. ಪಾಣಿಪತ್

ಚಲನಚಿತ್ರದ ಹೆಸರೇ ಸೂಚಿಸುವಂತೆ ಈ ಸಿನಿಮಾವು ಪಾಣಿಪತ್ ಯುದ್ಧ ಆಧಾರಿತ ಚಿತ್ರವಾಗಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಅಶುತೋಷ್ ಗೋವಾರಿಕರ್  ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನೇಕ ಬಾಲಿವುಡ್ ಸೂಪರ್ಸ್ಟಾರ್ ಗಳು ಕಾಣಿಸಿಕೊಳ್ಳಲಿದ್ದಾರೆ‌. ಸಂಜಯ್ ದತ್, ಅರ್ಜುನ್ ಕಪೂರ್ ಮತ್ತು ಕೃತಿ ಸನೂನ್ ಮುಖ್ಯ ಪಾತ್ರದಲ್ಲಿದ್ದಾರೆ.

 

Tags