ಆರೋಗ್ಯಸುದ್ದಿಗಳು

’21’ ಮ್ಯಾಜಿಕ್ ನಂಬರ್ ರಹಸ್ಯ

ಈ ನಂಬರ್ ಹಿಂದೆ ಇದೆ ಬಾರಿ ಲೆಕ್ಕಾಚಾರ

ಪ್ರಧಾನಿ ನರೇಂದ್ರ ಮೋದಿ ಇಡಿ ದೇಶವನ್ನು 21 ದಿನ ಲಾಕ್ ಡೌನ್ ಎಂದು ಘೋಷಿಸಿದ್ದಾರೆ ಅಷ್ಟಕ್ಕೂ 21 ದಿನಾನೇ ಯಾಕೆ? ಏನಿದು ಸಂಖ್ಯಾಶಾಸ್ತ್ರವೇ? ಮ್ಯಾಜಿಕ್ ನಂಬರ್? ಎಲ್ಲ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜ ಇದಕ್ಕೆ ಕಾರಣ 2019ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಹೊಸ ಕೊರೊನಾ ವೈರಸ್ ದೃಢಪಟ್ಟಿತ್ತು. ಅಲ್ಲಿಂದ ಹೊರಗೆ ಹರಡಿ ಈಗ 149 ದೇಶಗಳ 4.9 ಲಕ್ಷ ಜನರಿಗೆ ತಗುಲಿದ್ದು, 22 ಸಾವಿರ ಮಂದಿಯ ಸಾವುಗಳಿಗೆ ಕಾರಣವಾಗಿದೆ.

ಮೊದಲೇ ಎಚ್ಚೆತ್ತುಕೊಳ್ಳದ ಇಟಲಿ, ಚೀನಾ, ದಕ್ಷಿಣ ಕೊರಿಯಾದಲ್ಲಿ ಇಂದು ಮರಣ ಮೃದಂಗ ಬಾರಿಸುತ್ತಿದೆ. ಅದಕ್ಕಾಗಿಯೇ ಭಾರತದಲ್ಲಿ ಈ 21 ದಿನಗಳ ಗೃಹ ಬಂಧನ. ಹಾಗಾದರೆ 21 ದಿನಗಳಲ್ಲಿ ಇದು ನಿಯಂತ್ರಣಕ್ಕೆ ಬಂದು ಬಿಡುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಕಾಡಿತ್ತು.ಇದಕ್ಕೆ ಉತ್ತರ ಬೇಕೆಂದರೆ ಮೊದಲು ಕೊರೋನಾ ಎಂಬ ವೈರಸ್ನ ಸ್ವಭಾವ, ಅದರ ಜೀವಕ್ರಮದ ಬಗ್ಗೆ ಒಂದಷ್ಟು ಸ್ಪಷ್ಟತೆ ಮಾಹಿತಿ ನಮಗೆ ಗೊತ್ತಿರಬೇಕು. ಅದನ್ನರಿತು ನಾವು ಜವಾಬ್ದಾರಿಯುತವಾಗಿ ವರ್ತಿಸಿದರೆ ಭಯ ಪಡುವ ಪ್ರಮೇಯವೇ ಇಲ್ಲ. ನೆಗಡಿ, ಕೆಮ್ಮು, ಗಂಟಲು ಕೆರೆತ ಅಥವಾ ನೋವು, ಜ್ವರ ಮತ್ತು ಸಮಸ್ಯೆ ತೀವ್ರವಾದಲ್ಲಿ ಉಸಿರಾಟಕ್ಕೆ ತೊಂದರೆ- ಇವು ಕೊರೋನಾ ಸೋಂಕಿನ ಲಕ್ಷಣಗಳು.

ಸೋಂಕಿತರು ಕೆಮ್ಮಿದಾಗ ಇಲ್ಲವೇ ಸೀನಿದಾಗ ಎದುರಿನವರ ಮುಖಕ್ಕೆ ವೈರಸ್ಗಳು ಸಿಡಿದು ಸೋಂಕು ಹರಡುತ್ತದೆ. ಸಹಜವಾಗಿ ಸೋಂಕಿತರ ಕೈಯೊಳಕ್ಕೆ ವೈರಾಣು ಇರುತ್ತದೆ. ಅವರು ಏನನ್ನೇ ಮುಟ್ಟಿದರೂ ಅದಕ್ಕೆ ವೈರಸ್ ಮೆತ್ತಿಕೊಳ್ಳುತ್ತದೆ. ಇಂಥ ವೈರಾಣುಗಳು ಹಲವು ಗಂಟೆಗಳ ಕಾಲ ಬದುಕಿರುತ್ತವೆ ಹಾಗೂ ಸಂಪರ್ಕಕ್ಕೆ ಬಂದವರಿಗೆ ದಾಟುತ್ತವೆ. ಹೀಗೆ ಸೋಂಕು ತಗುಲಿದ 2 ರಿಂದ 7 ದಿನಗಳಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ. ಅಲ್ಲಿಯವರೆಗೂ ಅವರು ಆರಾಮಾಗಿಯೇ ಇದ್ದಂತೆ ಕಾಣುತ್ತಾರೆ.

ಹೀಗೆ ಒಳಹೊಕ್ಕ ಕೊರೋನಾ ವೈರಾಣುವಿನ ಆಯುಸ್ಸು 14 ದಿನಗಳು. ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಅವಧಿ ವೈರಸ್ ಮತ್ತು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಗಳ ನಡುವಿನ ಸಂಘರ್ಷವನ್ನು ಅವಲಂಬಿಸಿ ಇರುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಉಳ್ಳವರಲ್ಲಿ ಬೇಗ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಸಬಲರಲ್ಲಿ ಸೋಂಕು ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ವೈರಸ್ನ ಆಯುಸ್ಸು 14 ದಿನ, ರೋಗ ಲಕ್ಷಣ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಗರಿಷ್ಠ ಅವಧಿ 7 ದಿನ. ಒಟ್ಟು 21 ದಿನಗಳು. ಈ ಅವಧಿಯಲ್ಲಿ ನಾವು ಇತರರಿಂದ ದೂರ ಇದ್ದು ಬಿಟ್ಟರೆ ನಮಗೆ ಸೋಂಕು ತಗುಲುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ನರೇಂದ್ರ ಮೋದಿ 21 ದಿನಗಳ ಲಾಕ್ ಡೌನ್ ವಿಧಿಸಿದ್ದಾರೆ. 21 ದಿನಗಳ ಕಾಲ ಎಲ್ಲರು ಅಂತರ ಕಾಯ್ದುಕೊಂಡರೆ ಕೊರೊನಾ ವೈರಸ್ ತಡೆಗಟ್ಟಲು ಸಹಾಯಕಾರಿಯಾಗುತ್ತದೆ.

Tags