ಮಹಿಳೆಸುದ್ದಿಗಳು

ಬರಲಿದೆ 3 – ಈಡಿಯೆಟ್ಸ್ ಸೀಕ್ವೆಲ್!!

ಏಸ್ ಚಿತ್ರನಿರ್ಮಾಪಕ ರಾಜ್ ಕುಮಾರ್ ಹಿರ್ನಿ ಯಾವಾಗಲೂ ಪ್ರೇಕ್ಷಕರನ್ನು ತನ್ನ ಚಮತ್ಕಾರ ಶೈಲಿಯ ಕಥೆಯೊಂದಿಗೆ ಆಕರ್ಷಿಸುತ್ತಾರೆ. ಅವರ ಚಲನಚಿತ್ರಗಳು ಪ್ರಬಲವಾದ ಕಥಾವಸ್ತುವನ್ನು ಹೊಂದಿದ್ದು ಮಾತ್ರವಲ್ಲದೆ, ಕೊನೆಯವರೆಗೂ ಪ್ರೇಕ್ಷಕರ ಆಸಕ್ತಿಯನ್ನು ಸೆರೆಹಿಡಿಯುವ ಪ್ರಮುಖ ಅಂಶಗಳೊಂದಿಗೆ ಸಹ ಬೆಂಬಲಿತವಾಗಿದೆ. ‘3 ಇಡಿಯಟ್ಸ್’ ಎನ್ನುವ ಚಿತ್ರ ಮರೆಯಲಾಗದ್ದು. ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುಂತೆ ಮಾಡಿತ್ತು ರಾಜ್ಕುಮಾರ್ ಹಿರಾನಿಯವರ ಈ ಚಿತ್ರ

ಅಮೀರ್ ಖಾನ್, ಆರ್ ಮಾಧವನ್, ಶರ್ಮನ್ ಜೋಶಿ, ಬೋಮನ್ ಇರಾನಿ ಮತ್ತು ಕರೀನಾ ಕಪೂರ್ ಖಾನ್ ನಟಿಸಿದ ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯನ್ನು ಭರ್ತಿ ಮಾಡುವುದಲ್ಲದೆ ಅತ್ಯಂತ ಹಿಟ್ ಸಿನಿಮಾವಾಗಿ ಹೊರಹೊಮ್ಮಿತು. ರಾಜ್ ಕುಮಾರ್ ಹಿರಾನಿ ಈ ಚಿತ್ರದ ಸೀಕ್ವೆಲ್ ಮಾಡಲಿದ್ದಾರೆಯೆಂದು ಕೆಲವೇ ದಿನಗಳ ಹಿಂದೆ ಮಾಧ್ಯಮ ಸಂವಹನದಲ್ಲಿ ದೃಢಪಡಿಸಿದ್ದಾರೆ.

ಹಿರಾನಿ 3 ಈಡಿಯಟ್ಸ್ ಸೀಕ್ವೆಲ್ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಿಲ್ಲವಾದರೂ, ಈ ಚಿತ್ರದ ಬಗ್ಗೆ ಹಿರಾನಿ ಥ್ರಿಲ್ ಆಗಿದ್ದಾರೆಯಂತೆ. ಅವರು ತಮ್ಮ ಸಹ-ಲೇಖಕ ಅಭಿಜಾತ್ ಜೋಶಿ ಅವರೊಂದಿಗೆ ಕೆಲಸ ಮಾಡಲಿದ್ದಾರೆಯಂತೆ. ಇನ್ನೂ ಇದು ಆರಂಭಿಕ ಹಂತಗಳಲ್ಲಿ ಇರುವುದರಿಂದ ಅದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.. ಕೆಲವೇ ದಿನಗಳ ಹಿಂದೆ ಮಾತ್ರ ಕಥೆಯನ್ನು ಬರೆಯಲು ಪ್ರಾರಂಭಿಸಿದ್ದೇನೆ ಮತ್ತು ಇನ್ನೂ ಕೆಲವು ಸಮಯಗಳು ಬೇಕು ಎಂದಿದ್ದಾರೆ

 

Tags