ಸುದ್ದಿಗಳು

-3 + 1 ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಶ್ರೀ ಮುರುಳಿ

ರಮೇಶ್ ಯಾದವ್ ಅವರು ನಿರ್ದೇಶನ ಮಾಡಿರುವ ‘ಮೈನಸ್ ತ್ರೀ ಪ್ಲಸ್ ಒನ್ ‘ ಸಿನಿಮಾದ ಟ್ರೈಲರ್ ಅನ್ನು ಉಗ್ರಂ ಶ್ರೀ ಮುರುಳಿಯವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬೆಂಗಳೂರು, ಜು. 29: ಇಂದು ಬೆಳಿಗ್ಗೆ ನಟ ಉಗ್ರಂ ಶ್ರೀ ಮುರುಳಿಯವರು ‘ಮೈನಸ್ ತ್ರೀ ಪ್ಲಸ್ ಒನ್’ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಿ ಚಿತ್ರಕ್ಕೆ ಮತ್ತು ಚಿತ್ರತಂಡದವರಿಗೆ ಶುಭ ಹಾರೈಸಿದ್ದಾರೆ.

ಚಿತ್ರಕ್ಕೆ ಗುಡ್ ಲಕ್

“-3 + 1.. ಟೈಟಲ್ ಚೆನ್ನಾಗಿದೆ. ನಿರ್ಮಾಪಕ ನಿರ್ದೇಶಕರಿಗೆ ಒಳ್ಳೆದಾಗಲಿ. ಇಬ್ಬರಿಗೂ ಗುಡ್ ಲಕ್. ಇಡೀ ಚಿತ್ರತಂಡಕ್ಕೆ ಗುಡ್ ಲಕ್. ಒಂದು ಎನರ್ಜಿ ಇರೋ ಯುವಕರ ಟೀಮ್ ಸೇರಿಕೊಂಡು ಈ ಸಿನಿಮಾ ಮಾಡಿದೆ. ನೋಡಿ ಹರಸಿ, ಹಾರೈಸಿ, ನನಗೂ ಈ ಸಿನಿಮಾದ ಮೇಲೆ ಕುತೂಹಲ ಹುಟ್ಟಿದೆ. ಎಲ್ಲರ ಸಪೋರ್ಟ್ ಖಂಡಿತ ಈ ಚಿತ್ರಕ್ಕೆ ಬೇಕು’ ಎಂದು ಶ್ರೀ ಮುರುಳಿ ಹೇಳಿದ್ದಾರೆ.

ತಿಥಿ ಖ್ಯಾತಿಯ ಅಭಿಶೇಕ್

ತಿಥಿ ಖ್ಯಾತಿಯ ಅಭಿಶೇಕ್ ಈ ಚಿತ್ರಕ್ಕೆ ನಾಯಕನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರು ಫೈಟ್ ಗಳನ್ನು ಮಾಡಿದ್ದು, ಹಾಡುಗಳಲ್ಲಿ ನರ್ತಿಸಿದ್ದಾರೆ. ಅವರಿಗೆ ಜೋಡಿಯಾಗಿ ನವ ನಾಯಕಿ ಸಾಸ್ಯಾ ಅವರು ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಸೆಂಚೂರಿ ಗೌಡ ನಟಿಸಿದ್ದು, ಹಿರಿಯ ಕಲಾವಿದರಾದ ರತ್ನಮಾಲಾ, ಪದ್ಮಾವಾಸಂತಿ, ರಾಮಕೃಷ್ಣ ಅವರೂ ಸಹ ಅಭಿನಯಿಸಿದ್ದಾರೆ.

ತಂತ್ರಜ್ಞರು

ಶ್ರೀ ಜಗನ್ಮಾತೆ ಬ್ಯಾನರ್ ನಲ್ಲಿ ಎನ್ ಸತ್ಯನಾರಾಯಣ ಚಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಲಿಂಗರಾಜು ಕೆ.ಆರ್ ಸಂಕಲನ, ಎ.ಟಿ ರವೀಶ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜನೆ ಇದೆ. ಸಧ್ಯದಲ್ಲಿಯೇ ಈ ಚಿತ್ರವು ತೆರೆಗೆ ಬರಲಿದೆ.

Trailer launch by shrii muruli

 

@ sunil Javali

Tags

Related Articles

Leave a Reply

Your email address will not be published. Required fields are marked *