ವೈರಲ್ ನ್ಯೂಸ್ಸುದ್ದಿಗಳು

‘ಸೂಪರ್ ಮೆಮೊರಿ ಕಿಡ್’ ದಾಖಲೆಗೆ ಪಾತ್ರನಾದ ಬಾಲ ಪ್ರತಿಭೆ

ಸೋಷಿಯಲ್ ಮೀಡಿಯಾ ಬಳಸುತ್ತಿದ್ದವರಿಗೆ ಈ ಪ್ರತಿಭಾವಂತ ಬಾಲಕನ ಬಗ್ಗೆ ತಿಳಿದಿರುತ್ತದೆ. ಈ ಬಾಲಕನ ಹೆಸರು ರೋಹಿತ್, ವಯಸ್ಸು 4 ವರ್ಷ. ವಿಶೇಷವೆಂದರೆ ಇವನಿಗೆ ಕೆಲವೊಂದು ಇಂಗ್ಲೀಷ್ ಪದಗಳನ್ನು ಕೇಳುತ್ತಿದ್ದರೆ ಆತ ಅವುಗಳನ್ನು ಕನ್ನಡದಲ್ಲಿ ಹೇಳುತ್ತಾನೆ. ಈ ರೀತಿ ಆತ ಹೇಳುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅಂದ ಹಾಗೆ ರೋಹಿತ್ ಇದೀಗ ‘ಸೂಪರ್ ಮೆಮೊರಿ ಕಿಡ್” ಎಂದು ‘ಇಂಡಿಯಾ ಬುಕ್ ಆಫ್ ರಿಕಾರ್ಡ’ನಿಂದ ಆಯ್ಕೆಯಾಗಿದ್ದಾನೆ. ಈ ಬಾಲಕ ಕೊಪ್ಪಳ ಜಿಲ್ಲೆಯ ಕಾರಟಗಿಯ ಬಡ ಕಾರ್ಮಿಕ ಲಿಂಗರಾಜ್ ಅವರ ಮಗ.

ಇನ್ನು ರೋಹಿತ್ ನ ಮಾತಿನ ಕೌಶಲ್ಯಕ್ಕೆ ಮರಳಾಗದವರೇ ಇಲ್ಲ ಎನ್ನಬಹುದು. ಈತನ ನೆನಪಿನ ಶಕ್ತಿಗೆ ಈ ಪ್ರಶಸ್ತಿ ಒಲಿದು ಬಂದಿದೆ. ಇನ್ನು ಈ ಬಾಲಕನ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದು, ಸಾಧನೆ ಹೀಗೆಯೇ ಸಾಗುತ್ತಿರಲಿ ಎಂದು ಹರಸುತ್ತಿದ್ದಾರೆ.

ನಿಶ್ವಿತಾರ್ಥ ಮಾಡಿಕೊಂಡ ‘ಆ ದಿನಗಳು’ ಚಿತ್ರದ ಅರ್ಚನಾ

#rohith #MemoryKidAward  #IndiaBookOfrecord  #Social Media

Tags