ಸುದ್ದಿಗಳು

50 ದಿನ ಪೂರೈಸಿದ ‘ನಟಸಾರ್ವಭೌಮ’

ಬೆಂಗಳೂರು, ಮಾ.26:

ಪುನೀತ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ 50 ದಿನಗಳನ್ನು ಪೂರೈಸಿದ ಖುಷಿಯಲ್ಲಿದೆ. ಇನ್ನೂ ಈ ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಿರ್ದೇಶಕ ಪವನ್ ಒಡೆಯರ್ ಸಿನಿಮಾ ಪೋಸ್ಟರ್ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

50ದಿನದ ಖುಷಿಯಲ್ಲಿ ‘ನಟಸಾರ್ವಭೌಮ’

ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಸಿನಿಮಾ ‘ನಟಸಾರ್ವಬೌಮ’. ಸಿನಿಮಾ ಚಿತ್ರೀಕರಣ ಹಂತದಲ್ಲಿಯೇ ಸಕ್ಕತ್ ಸೌಂಡ್ ಮಾಡಿತ್ತು. ಪೋಸ್ಟರ್ ಟೀಸರ್ ಇನ್ನು ಡಾನ್ಸ್ ಹಾಡುಗಳು ಹೀಗೆ ಎಲ್ಲವೂ ಕೂಡ ವಿಶೇಷವಾಗಿದ್ದವು. ಇನ್ನೂ ಬಿಡುಗಡೆಯ ನಂತರವೂ ಹೌಸ್ ಫುಲ್ ಪ್ರದರ್ಶನ ಕಂಡ ಸಿನಿಮಾವಾಗಿತ್ತು. ಇದೀಗ ಈ ಸಿನಿಮಾ 50ದಿನಗಳನ್ನು ಪೂರೈಸಿದೆ.

ಗೋಲ್ಡನ್ ಹಿಟ್ ಅಂದ ನಿರ್ದೇಶಕ

ಹೌದು, ಈ ವಿಚಾರವಾಗಿ ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ಹಾಕಿದ್ದಾರೆ. ಇದರ ಜೊತೆಗೆ ಗೋಲ್ಡನ್ ಹಿಟ್ ಅಂತಾ ಬರೆದುಕೊಂಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ರಚಿತಾ ಹಾಗೂ ಅನುಪಮ ಇಬ್ಬರು ನಾಯಕಿಯರಿದ್ದಾರೆ. ಈಗಾಗಲೇ ಸಕ್ಕತ್ ಸೌಂಡ್ ಮಾಡ್ತಾ ಇರುವ ಈ ಸಿನಿಮಾ ಶತ  ದಿನೋತ್ಸವ ಆಚರಿಸಿಕೊಳ್ಳಲಿ ಅನ್ನೋದು ಅಭಿಮಾನಿಗಳ ಆಶಯ.

ಕಿರುತೆರೆಯಿಂದ ಬೆಳ್ಳಿತೆರೆಗೆ ಭರತ್ ಬೋಪಣ್ಣ

#balkaninews #puneethrajkumar #sandalwood #kannadamovies #natasaarvabhowmakannadamovie

Tags