ಸುದ್ದಿಗಳು

50 ದಿನದ ಸಂಭ್ರಮದಲ್ಲಿ ‘ದಿ ವಿಲನ್’ ..! ಜೋಗಿ ಪ್ರೇಮ್ ಸಂತಸ …!

ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ಸಿನಿಮಾ

ಬೆಂಗಳೂರು ,ಡಿ.7: ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ “ದಿ ವಿಲನ್’ ಚಿತ್ರ 50 ದಿನ ಪೂರೈಸಿ, ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ವಿಗೆ ಕಾರಣವಾದ ಎಲ್ಲ ಅಭಿಮಾನಿಗಳಿಗೆ ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

70 ಕೋಟಿ ಕಲೆಕ್ಷನ್ ಮಾಡಿದ ‘ದಿ ವಿಲನ್’ …!

ಹೌದು, ತೆರೆಕಂಡ ಮೊದಲ ವಾರದಲ್ಲೇ ₹70 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಂತಹ ಪ್ರೇಮ್ ನಿರ್ದೇಶನದ “ದಿ ವಿಲನ್’ ಚಿತ್ರ ಸ್ಯಾಂಡಲ್‍ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿ ಅಕ್ಟೋಬರ್ 18 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ‘ದಿ ವಿಲನ್’ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಬೆನ್ನಲ್ಲೆ ಈ ಚಿತ್ರಕ್ಕೆ ಬಹಳಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಅವೆಲ್ಲವೂ ಮೆಟ್ಟು ನಿಂತು ಸಿನಿಮಾ ಥಿಯೇಟರ್ ಭರ್ಜಿರಿಯಾಗಿ ಮುಂದುವರೆಯುತ್ತಿದೆ.

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪ್ರೇಮ್ …!

ನಿರ್ದೇಶಕ ಜೋಗಿ ಪ್ರೇಮ್ ‘ದಿ ವಿಲನ್’ ಚಿತ್ರದ ಯಶಸ್ವಿಗೆ ಕಾರಣರಾದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ಕಡೆಯಿಂದ ಮಾಧ್ಯಮ ಮಿತ್ರರಿಗೆ ಹಾಗೂ ಎಲ್ಲರಿಗೂ ಧನ್ಯವಾದಗಳು . ಈ ಚಿತ್ರವನ್ನು ಬೆಂಬಲಿಸಿ ಪ್ರೋತ್ಸಾಹಿಸಿದಕ್ಕೆ. ಸದ್ಯ  ಚಿತ್ರ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಹೊಸವರ್ಷಕ್ಕೆ ಸದ್ಯದಲ್ಲೇ ನನ್ನ ಮುಂದಿನ ಚಿತ್ರದ ಬಗ್ಗೆ ಹೇಳುವುದಾಗಿ ಟ್ವಿಟ್ ಮಾಡಿದ್ದಾರೆ.

Tags

Related Articles