ಸುದ್ದಿಗಳು

75 ದಿನಗಳನ್ನು ಪೂರೈಸಿದ ಕೆಜಿಎಫ್!!

ಬೆಂಗಳೂರು,ಮಾ.6: ಕಳೆದ ವರ್ಷ ನವ್ಹೆಂಬರ್ 21 ರಂದು ಬಿಡುಗಡೆಯಾಗಿದ್ದ ‘ಕೆ.ಜಿ.ಎಫ್’ ಇಂದು ಯಶಸ್ವಿ 75 ದಿನಗಳನ್ನು ಪೂರೈಸಿ, ಶತದತ್ತ ಮುನ್ನುಗ್ಗುತ್ತಿವೆ.

ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್

ಇನ್ನು ‘ಕೆ.ಜಿ.ಎಫ್’ ಬಗ್ಗೆ ಹೇಳುವುದಾದರೆ, ಹೆಚ್ಚು ಸ್ಕ್ರೀನ್ ಗಳಲ್ಲಿ 75 ದಿನಗಳು ಕಳೆದಿದ್ದು, ಪ್ರಶಂಸೆಯ ಮಹಾ ಪೂರವೇ ಹರಿದು ಬಂದಿದೆ. ಪ್ರಶಾಂತ್ ನೀಲ್ ನಿರ್ದೇಶನ, ವಿಜಯ್ ಕಿರಗಂದೂರ್ ನಿರ್ಮಾಣದ ಈ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 50ದಿನಗಳನ್ನು ಕಂಪ್ಲೀಟ್ ಮಾಡುವ ಮೊದಲೇ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾಬಂದಿತ್ತು.. ಕನ್ನಡ, ಹಿಂದಿ, ತಮಿಳು ಮಾತ್ರವಲ್ಲ ತೆಲುಗಿನಲ್ಲೂ ಕೆಜಿಎಫ್ ಹವಾ ದಿನೇ ದಿನೇ ಹೆಚ್ಚಾಗುತ್ತಿದೆ..

ಕೆಜಿಎಫ್ ಚಿತ್ರದಲ್ಲಿ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯ ಹಾಗೂ ಇನ್ನಿತರ ಪಾತ್ರಗಳನ್ನು ಮರೆಯುವಂತಿಲ್ಲ!!

ಈ ನಡುವೆ ‘ಕೆಜಿಎಫ್’ ಚಾಪ್ಟರ್-2 ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆಗೆ ಈ ಸಂಭ್ರಮದಲ್ಲಿ ಚಿತ್ರತಂಡ ಉತ್ತರಿಸಿದ್ದು, ಇದೇ ಮಾರ್ಚ್ 2ನೇ ವಾರದಿಂದ ‘ಕೆಜಿಎಫ್-2’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಕೇಳಿರಿ ‘ನಟಸಾರ್ವಭೌಮ’ ನ ಶೀರ್ಷಿಕೆ ಹಾಡಿನ ಫ್ಲ್ಯೂಟ್ ವರ್ಷನ್

 

Tags