ಸುದ್ದಿಗಳು

ಜಿಂದಾಲ್ ಅಲುಮಿನಿಯಂ ಕಂಪನಿಗೆ ಧನ್ಯವಾದ ಹೇಳಿದ ‘777 ಚಾರ್ಲಿ’

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಸಂಗೀತಾ ಅಭಿನಯದ ‘777 ಚಾರ್ಲಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರಕ್ಕೆ ಬೆಂಗಳೂರಿನ ಜಿಂದಾಲ್ ಅಲುಮಿನಿಯಂ ಕಂಪನಿಯಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಈ ಕುರಿತು ಚಿತ್ರತಂಡ ಪೇಸ್ಬುಕ್ ನಲ್ಲಿ ಹಂಚಿಕೊಂಡಿದೆ.

‘ಜಿಂದಾಲ್ ಅಲುಮಿನಿಯಂ ಕಂಪನಿಯ ಅಧ್ಯಕ್ಷರು, ಸಹೋದ್ಯೋಗಿಗಳು ಸೇರಿದಂತೆ ಅನೇಕರಿಗೆ ನಮ್ಮ ಧನ್ಯವಾದಗಳು’ ಎಂದಿರುವ ಚಿತ್ರತಂಡ, ಸದ್ಯದಲ್ಲಿಯೇ ತಮ್ಮ ಚಿತ್ರದ ಶೂಟಿಂಗ್ ಮುಗಿಸಲಾಗುತ್ತದೆ ಎಂದಿದ್ದಾರೆ.

ಈ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದು, ಇಡೀ ಚಿತ್ರವು ನಾಯಕ ಮತ್ತು ಅವನು ಸಾಕಿರುವ ಶ್ವಾನದೊಂದಿಗೆ ಸಾಗುತ್ತದೆ. ಇಲ್ಲಿ ನಾಯಕನ ಪಯಣ ಕರ್ನಾಟಕದಿಂದ ಕಾಶ್ಮೀರದ ತನಕ ಸಾಗುತ್ತದೆ, ಈ ಪಯಣದಲ್ಲಿ ಆ ಶ್ವಾನವೂ ಇರಲಿದೆ. ಇದರಿಂದ ಪ್ರಾಣಿ ಹಾಗೂ ಮನುಷ್ಯನ ಗಾಢ ಸಂಬಂಧಧ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದಾಗಿದೆ.

ರಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ನಾಬಿನ್ ಪೌಲ್ ಸಂಗೀತವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ಸ್ಟಾಗ್ರಾಂಗೆ ಲಗ್ಗೆ ಇಟ್ಟ ಶಿವಣ್ಣ!!

#777charlie #movie #shooting #balkaninews #rakshithshetty #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags