
ಬೆಂಗಳೂರು.ಮಾ.20: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸುತ್ತಿರುವ ‘777 ಚಾರ್ಲಿ’ ಚಿತ್ರದ ಚಿತ್ರೀಕರಣದ ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಜಂಟಿಯಾಗಿ ನಿರ್ಮಿಸುತ್ತಿದ್ದು, ಕಿರಣ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಮೊದಲ ಹಂತದ ಚಿತ್ರಿಕರಣ ಮುಗಿಸಿರುವ ಚಿತ್ರತಂಡದವರು ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದು, ಈ ಚಿತ್ರತಂಡಕ್ಕೆ ಹೊಸದಾಗಿ ಇಬ್ಬರು ಮುದ್ದಾದ ಪುಟಾಣಿಗಳು ಸೇರ್ಪಡೆಯಾಗಿದ್ದಾರೆ. ಹೌದು, ಚಾರ್ಲಿಯಷ್ಟೆ ಮುಗ್ಧ ಪಾತ್ರ ಆದ್ರಿಕಾ ಮತ್ತು ಧರಣಿ ಎಂಬ ಪಾತ್ರಗಳನ್ನು ನಿರ್ವಹಿಸಲು ಇಬ್ಬರು ಪುಟ್ಟ ಮಕ್ಕಳು ಈಗ ‘ಚಾರ್ಲಿ’ ಬಳಗ ಸೇರಿಕೊಂಡಿದ್ದಾರೆ.
ಈ ಇಬ್ಬರು ಮಕ್ಕಳು ಯಾರೆಂದರೆ, ಬೇಬಿ ಡಾಲ್ಸ್ ಏಳು ವರ್ಷದ ಹುಬ್ಬಳ್ಳಿ ಹುಡುಗಿ ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋದಲ್ಲಿ ಜನಪ್ರಿಯತೆ ಗಳಿಸಿದ್ದ ಶಾರ್ವರಿ ಮತ್ತು ಡಬ್ ಸ್ಯ್ಮಾಶ್ ಮೂಲಕ ಜನಪ್ರಿಯತೆ ಗಳಿಸಿರುವ ಪ್ರಾಣ್ಯ ಸೇರಿಕೊಂಡಿದ್ದಾರೆ.ಇವರಿಬ್ಬರೂ ಚಿತ್ರದಲ್ಲಿ ಆದ್ರಿಕಾ ಮತ್ತು ಧರಣಿ ಎಂಬ ಪಾತ್ರ ಮಾಡಲಿದ್ದಾರೆ.
ಇನ್ನು ಚಿತ್ರದಲ್ಲಿ ನಾಯಕನಷ್ಟೇ ‘ಚಾರ್ಲಿ’ ಎಂಬ ನಾಯಿಯೇ ಪ್ರಮುಖ ಪಾತ್ರಧಾರಿ. ಆ ಚಾರ್ಲಿಯ ಜೊತೆಗೆ ರಕ್ಷಿತ್ ಶೆಟ್ಟಿ, ಶಾರ್ವರಿ, ಪ್ರಾಣ್ಯ ಎಲ್ಲರ ಪಯಣವೂ ಸಾಗುತ್ತದೆ. ಇದಲ್ಲದೇ ಚಿತ್ರದಲ್ಲಿ ಭಾವನಾತ್ಮಕ ಅಂಶಗಳು ಸಹ ಇರಲಿವೆ. ಹೀಗಾಗಿ ಅಡೀಶನ್ ಮೂಲಕ ಈ ಇಬ್ಬರು ಮಕ್ಕಳನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಈ ಇಬ್ಬರು ಪುಟಾಣಿಗಳು ಚಿತ್ರಗಳಲ್ಲಿ ಎಲ್ಲಿಯೂ ಮುಖಾಮುಖಿಯಾಗುವುದಿಲ್ಲ.
ಸದ್ಯ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಶೂಟಿಂಗ್ ನಲ್ಲಿ ಬುಸಿಯಾಗಿದ್ದಾರೆ. ಸದ್ಯದಲ್ಲಿಯೇ ಈ ಚಿತ್ರದ ಶೂಟಿಂಗ್ ಮುಗಿಯಲಿದೆ. ಇದಾದ ಬಳಿಕ ‘ಚಾರ್ಲಿ’ ಬಳಗ ಸೇರಿಕೊಳ್ಳಲಿದ್ದಾರೆ. ಇನ್ನು ಚಿತ್ರದ ಟೀಸರ್ ರಕ್ಷಿತ್ ಜನ್ಮದಿನದಂದು (ಜೂ 6) ರಂದು ಬಿಡುಗಡೆಯಾಗುತ್ತಿದ್ದು, ನಾಯಕಿಯಾಗಿ ‘ಎ ಪ್ಲಸ್’ ಖ್ಯಾತಿಯ ಸಂಗೀತಾ ನಟಿಸುತ್ತಿದ್ದಾರೆ.
#777charli, #children, #balkaninews #kannadasuddigalu, #rakshithshetty, #sangeetha #filmnews