ಸುದ್ದಿಗಳು

‘8 ಎಂ ಎಂ’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ನಟಿಸಿರುವ ‘8 ಎಂ ಎಂ’ ಸಿನಿಮಾ

ನವರಸ ನಾಯಕ ಜಗ್ಗೇಶ್ ಅಭಿನಯಿಸಿರುವ ‘8 ಎಂ ಎಂ’ ಚಿತ್ರವು ತನ್ನ ವಿಭಿನ್ನ ಪೋಸ್ಟರ್ ಗಳಿಂದ ಗಮನ ಸೆಳೆಯುತ್ತಿದ್ದು, ಸದ್ಯ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ.

ಬೆಂಗಳೂರು, ಸ. 07: ನವರಸ ನಾಯಕ ಜಗ್ಗೇಶ್ ಅವರ ವೃತ್ತಿ ಬದುಕಿನಲ್ಲಿ ಇದು ವಿಭಿನ್ನ ಪಾತ್ರ ಅಂತ ಹೇಳಲಾಗಿರುವ , ಬಹು ನಿರೀಕ್ಷಿತ ‘8 ಎಂಎಂ’ ಚಿತ್ರದ ಹಾಡುಗಳನ್ನು ಲಹರಿ ಸಂಸ್ಥೆಯವರು ಬಿಡುಗಡೆ ಮಾಡಿದ್ದಾರೆ.

ನೆಗೆಟಿವ್ ಪಾತ್ರದಲ್ಲಿ ಜಗ್ಗೇಶ್

ಈ ಚಿತ್ರದಲ್ಲಿ ನಟ ಜಗ್ಗೇಶ್ ಖಳ ನಟನ ಛಾಯೆಯಿರುವ ಪಾತ್ರದಲ್ಲಿ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ಮಯೂರಿ ನಟಿಸಿದ್ದಾರೆ. ಇವರೊಂದಿಗೆ ವಶಿಷ್ಟ ಸಿಂಹ ಹಾಗೂ ರಾಕ್ಲೈನ್ ವೆಂಕಟೇಶ್ ಅವರುಗಳು ಸಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡುಗಳು ಯೂಟ್ಯೂಬ್ ನಲ್ಲಿಯೂ ಲಭ್ಯವಿದ್ದು, ಕೇಳುಗರಿಂದ ಮೆಚ್ಚುಗೆ ಗಳಿಸುತ್ತಿವೆ. ಜೂಡಿ ಸ್ಯಾಂಡಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ನಿರ್ದೇಶಕರಿಗೆ ಧನ್ಯವಾದ

‘ನನಗೆ ಈ ಸಿನಿಮಾ ಮೂಲಕ ರಿಯಲ್ ಚೇಂಜ್ ಓವರ್ ಸಿಗುತ್ತಿದೆ. ನಾನು ನೆಗೆಟಿವ್ ಪಾತ್ರ ಮಾಡುತ್ತೇನೋ, ಇಲ್ಲವೋ ಎನ್ನುವ ಭಯ ನಿರ್ದೇಶಕರಲ್ಲಿತ್ತು. ಕಥೆ ಹೇಳಿದರು, ಇಷ್ಟವಾಯಿತು. ಸಿನಿಮಾ ಎಂದರೆ ಅದರಲ್ಲಿ ನಾಯಕ-ನಾಯಕಿ ಇರಬೇಕು. ಒಂದಷ್ಟು ಹಾಡುಗಳು ಇರಬೇಕು ಎನ್ನುವ ಭಾವನೆ ಮನಸ್ಸಿನಲ್ಲಿ ಕೂತು ಬಿಟ್ಟಿತ್ತು. ಆದರೆ ನಿರ್ದೇಶಕ ಹರಿ ಅದನ್ನು ಅಳಿಸಿದ್ದಾರೆ’ ಎಂದು ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತಾರೆ ಜಗ್ಗೇಶ್.

ಚಿತ್ರದ ಕಥೆ

ವಯಸ್ಸಾದ ಕಾಲದಲ್ಲಿ ಹಣವಿಲ್ಲದಾಗ ಏನೆಲ್ಲಾ ಪರಿಸ್ಥಿತಿಯನ್ನ ಒಬ್ಬ ತಂದೆಯು ಹೇಗೆ ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದ್ದು, ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ,ಪ್ರದೀಪ್ ಮತ್ತು ಸಲೀಮ್ ಶಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

Tags

Related Articles