ಸುದ್ದಿಗಳು

“8 ಎಂಎಂ’ ಗೂ ‘ಕಾಲಾ’ ಸಿನಿಮಾಕ್ಕೂ ಏನಿದೆ ನಂಟು?

ಜಗ್ಗೇಶ್ ಹೊಸ ಲುಕ್

ಬೆಂಗಳೂರು,ಸೆ.11: ನವರಸ ನಾಯಕ ಜಗ್ಗೇಶ್‌ ವಿ”ನೀರ್‌ ದೋಸೆ’ ನಂತರ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘8 ಎಂಎಂ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ವಿಭಿನ್ನ ಗೆಟಪ್‍ನಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಕಾಲದಲ್ಲಿ ಕೈಯಲ್ಲಿ ಹಣ ಇಲ್ದೇ ಇದ್ದರೆ ಏನಾಗುತ್ತೆ ಅನ್ನುವ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದ್ದು, ಟೀಸರ್ ನಲ್ಲಿ ” ಕಾದೋನ್ ಮೇಧಾವಿ, ನುಗ್‍ದೋನ್ ಮೂರ್ಖ, ಕಾಯೋಣ… ಎಂದು ಜಗ್ಗೇಶ್ ಹೇಳುವ ಡೈಲಾಗ್‍ ಗೆ ಸಿನಿರಸಿಕರು ಫಿದಾ ಆಗಿದ್ದಾರೆ.

ಕಾಲಾ’ ಅಲ್ಲ ಇದು ‘8ಎಂಎಂ’

‘ಕಾಲಾ’ ಟೈಟಲ್​ ಕಾರ್ಡನ್ನು ‘8ಎಂಎಂ’ನಲ್ಲೂ ಬಳಸಿಕೊಳ್ಳಲಾಗಿದೆ. ಅದೇ ಕೆಂಪು ಬಣ್ಣ, ಅದೇ ರೀತಿಯ ವಿಭಿನ್ನ ಶೈಲಿಯಲ್ಲಿ ಬರೆದಿರೋ ಅಕ್ಷರಗಳು ಸಿನಿ ಪ್ರೇಮಿಗಳನ್ನು ಒಮ್ಮೆ ತಟಸ್ಥವಾಗುವಂತೆ ಮಾಡುತ್ತದೆ.  ಶೀರ್ಷಿಕೆಯ ​ ಕಾರ್ಡಿನಲ್ಲಿ ರಜನಿ ಮುಖವನ್ನೂ ತೋರಿಸಲಾಗಿತ್ತು. ಇದೀಗ, ಕಾಲಾದಂತೆಯೇ’ 8 ಎಂಎಂ’ ಶೀರ್ಷಿಕೆಯನ್ನು​ ರೂಪಿಸಲಾಗಿದೆ. ಟೈಟಲ್​​ ಜೊತೆಗೆ ಜಗ್ಗೇಶ್​ ಅವರ ಉಗ್ರ ಲುಕ್​ ಕಾಂಬಿನೇಷನ್​ ಇದೆ.

Tags

Related Articles