ಸುದ್ದಿಗಳು

ಯಶ್ ಗೆ ಬಿಗ್ ಸಕ್ಸಸ್ ತಂದುಕೊಟ್ಟ ಈ ಸಿನಿಮಾಗೆ 8 ವರ್ಷ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ‘ಕಿರಾತಕ’. ಯಶ್ ವೃತ್ತಿ ಬದುಕಿನಲ್ಲಿ ಮಹತ್ತರ ಮೈಲುಗಲ್ಲಿನ ಸಿನಿಮಾ ‘ಕಿರಾತಕ’ ಎಂದರೇ ತಪ್ಪಾಗುವುದಿಲ್ಲ.  ‘ಕಿರಾತಕ’ ಚಿತ್ರದಲ್ಲಿ ಯಶ್  ಮನೋಜ್ಞವಾಗಿ ಅಭಿನಯಿಸಿದ್ದರು. ಮಂಡ್ಯ ಶೈಲಿಯ ಮಾತು, ಖಡಕ್ ಲುಕ್  ಹೀಗೆ ಅವರ ಹಾವ ಭಾವಗಳು ಯಶ್ ಅಭಿಮಾನಿಗಳು ಇಂದಿಗೂ ನೆನಪಿನ್ನಲ್ಲಿಟ್ಟುಕೊಂಡಿದ್ದಾರೆ.

Image result for kirataka

ಹಳ್ಳಿ ವಾತಾವರಣದಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಜನರ ಮನಸ್ಸಿಗೆ ಬಹಳ ಹತ್ತಿರವಾಗಿತ್ತು. ಕೌಟುಂಬಿಕ ಹಾಗೂ ಪ್ರೀತಿ ಕಥೆಯನ್ನೋಳಗೊಂಡ ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 8 ವರ್ಷವಾಗಿದೆ.

ಹೌದು, 2011 ಜೂನ್ 24ರಂದು ಈ ಸಿನಿಮಾ ಬಿಡುಗಡೆಗೊಂಡಿತ್ತು. ಹಾಸ್ಯ ನಟ ಚಿಕ್ಕಣ್ಣನವರು ಕೂಡ ಈ ಚಿತ್ರದ ಮೂಲಕವೇ ಸ್ಯಾಂಡಲ್ ವುಡ್ ಕಾಲಿಟ್ಟಿದ್ದರು. ಈ ಚಿತ್ರದಲ್ಲಿನ ಯಶ್ ಹಾಗೂ ಚಿಕ್ಕಣ್ಣನವರ ಜೋಡಿ ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ನಂದೀಶನಾಗಿ ಯಶ್ ಅಭಿನಯಸಿದರೆ, ನೇತ್ರಾಳಾಗಿ ಓವಿಯಾ ಅಭಿನಯಸಿ ಗಮನ ಸೆಳೆದಿದ್ದರು. ಇಷ್ಟೇ ಅಲ್ಲದೇ ಈ ಚಿತ್ರ ನೂರು ದಿನಗಳನ್ನು ಪೂರೈಸಿ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿತ್ತು.

ಪ್ರದೀಪ್ ರಾಜ್ ನಿರ್ದೇಶನದಲ್ಲಿ ಮೂಡಿಬಂದತಹ ಈ ಸಿನಿಮಾವನ್ನು ಶರವಣ ಮೂರ್ತಿ ಹಾಗೂ ಶಾಂತ ಕುಮಾರಿ ನಿರ್ಮಾಣ ಮಾಡಿದ್ದರು. ಕಿರಾತಕ ಎಷ್ಟರ ಮಟ್ಟಿಗೆ ಸಕ್ಸಸ್ ಆಗಿತ್ತೆಂದರೆ ಇದೀಗ ಕಿರಾತಕ ಸೀಕ್ವೆಲ್ ಬರುತ್ತಿದೆ.

ಅದುವೇ ‘ಮೈ ನೇಮ್ ಇಸ್ ಕಿರಾತಕ’. ಇತ್ತೀಚೆಗಷ್ಟೇ ‘ಮೈ ನೇಮ್ ಇಸ್ ಕಿರಾತಕ’ ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಸದ್ಯಕ್ಕೆ ಒಂದು ಬ್ರೇಕ್ ಕೊಟ್ಟಿದ್ದೀವಿ ಎಂದು ನಾಯಕ ಯಶ್ ರವರು ಹೇಳಿದ್ದರು. ಈ ಚಿತ್ರಕ್ಕೆ ಗಡ್ಡ ಬೇಕಾಗಿಲ್ಲ. ಆದರೆ ‘ಕೆ.ಜಿ.ಎಫ್ -2 ಗೆ ಗಡ್ಡ ಬೇಕಾಗಿದೆ. ಹೀಗಾಗಿ ಎರಡೂ ಚಿತ್ರವನ್ನು ಸರಿದೂಗಿಸಿಕೊಂಡು ಮಾಡುತ್ತೇವೆ ಎಂದಿರುವುದು ವರದಿಗಳಾಗಿವೆ.

Related image

Related image

Image result for kirataka

ಹೃದಯಾಘಾತದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು…!!!

#balkaninews #kirataka #kiratakakannadamovie #yashmovies #yashandchikkanna #pradeepraj

Tags