ಸುದ್ದಿಗಳು

ಯುವ ಪ್ರೇಮಿಗಳ ಮನ ಮುಟ್ಟುವಂತಿದೆ ‘99’ ಟ್ರೇಲರ್!!

ಬೆಂಗಳೂರು,ಏ.16: ಪ್ರೀತಮ್ ಗುಬ್ಬಿ ನಿರ್ದೇಶನದ ‘99’ ಚಿತ್ರದ  ಟ್ರೇಲರ್  ಬಿಡುಗಡೆಯಾಗಿದೆ.. ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ತ್ರಿಶಾ ಹಾಗೂ ವಿಜಯ್ ಸೇತುಪತಿ ಅಭಿಯನದ ’99’ ಇದೀಗ ಕನ್ನಡಕ್ಕೆ ರಿಮೇಕ್ ಆಗಿದೆ.. 99 ಚಿತ್ರದ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರಿಗೆ ಇದು 100 ನೇ ಚಿತ್ರ ಕೂಡ ಹೌದು.. ಈ ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಸಂಗೀತ ಪ್ರೇಮಿಗಳನ್ನು ಒಮ್ಮೆ ತನ್ನತ್ತ ಸೆಳೆಯುತ್ತದೆ..

Image result for 99 kannada movie trailer

ರಾಮು-ಜಾನುವಿನ ಪ್ರೇಮ ಕಥೆ

ಇನ್ನು ಈ ಚಿತ್ರದಲ್ಲಿ ಗಣೇಶ್ ಲುಕ್ ಕೂಡ ತುಂಬಾ ವಿಭಿನ್ನವಾಗಿದೆ.. ಗಡ್ಡ ಬಿಟ್ಟುಕೊಂಡು ಹಿಮಾಲಯದ ತಪ್ಪಲಿನ ಸುತ್ತಮುತ್ತ ಸುತ್ತಾಡುವ ಗಣೇಶ್ ಸೆಲ್ಫೀ ಫೋಟೋಗಳನ್ನು ತೆಗೆದುಕೊಂಡು, ಕ್ಯಾಮರಾ ಹಿಡಿದುಕೊಂಡು ಸುತ್ತಾಡುತ್ತಿರುತ್ತಾನೆ.. ಇನ್ನು ಜಾಕಿ ಭಾವನಾ ನಾಯಕಿಯಾಗಿದ್ದು  ಭಾವನ ಎಂಟ್ರಿ ಕೂಡ ಚೆನ್ನಾಗಿದೆ.. “ಎಲ್ಲಾ ಚೇಂಜ್ ಆಗಿರುತ್ತೆ, ಎಲ್ಲಾ ಚೇಂಜ್ ಆಗಿರುತ್ತಾರೆ ಅನ್ಕೊಂಡೆ ಆದರೆ ಯಾವುದೂ ಚೇಂಜ್ ಆಗಿಲ್ಲ” ಎನ್ನುವ ಡೈಲಾಗ್ ಮನಮಿಟ್ಟುವಂತಿದೆ..

Image result for 99 kannada movie trailer

ರಾಮುವಿನ ಪಾತ್ರದಲ್ಲಿ ಗಣೇಶ್ ಹಾಗೂ ಜಾನು ಪಾತ್ರದಲ್ಲಿ ಭಾವನಾ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ರಾಮು ಜಾನುವಿನ ಕಥೆ ಒಂದು ಥರಾ ಯುವ ಪ್ರೇಮಿಗಳನ್ನು ಮನ ಕಲಕುವಂತಿದೆ.

ತಮಿಳಿನ ರಿಮೇಕ್

ತಮಿಳಿನಲ್ಲಿ ತ್ರಿಶಾ ಮಾಡಿದ ಪಾತ್ರಕ್ಕೆ ಇದೀಗ ಕನ್ನಡದಲ್ಲಿ ಜಾಕಿ ಭಾವನಾ ಜೀವ ತುಂಬಲಿದ್ದಾರೆ. ಈ ಮೂಲಕ ಗಣೇಶ್ ಮತ್ತು ಭಾವನಾ ಜೋಡಿಯ 2ನೇ ಸಿನಿಮಾ ಇದಾಗಿದೆ… ಈಗಾಗಲೇ ಹಾಡುಗಳಿಂದ ಗಮನ ಸೆಳೆದಿದ್ದ ‘99’ ಈಗ ಮತ್ತೊಂದು  ಭಾವನಾತ್ಮಕ ಟ್ರೇಲರ್ ಮೂಲಕವೂ ಗಮನ ಸೆಳೆದಿದೆ.

ದ್ವಿತೀಯ ಪಿಯುಸಿಯಲ್ಲಿ ನಟ ಪ್ರೇಮ್ ಮಗಳ ಸಾಧನೆ!!

#balkaninews #kanandamovie #bhavanamenon #ganesh #99movietrailer

Tags