ಸುದ್ದಿಗಳು

ಹೊಸ ಪೋಸ್ಟರ್ ಗಳಿಂದ ಗಮನ ಸೆಳೆಯುತ್ತಿದೆ ‘99’

ಬೆಂಗಳೂರು,ಮಾ.6: ತಮಿಳಿನಲ್ಲಿ ಕಳೆದ ವರ್ಷದ ಹಿಟ್ ಸಿನಿಮಾದಲ್ಲಿ ‘96’ ಕೂಡ ಒಂದು.. ಸಿ. ಪ್ರೇಮ್ ಕುಮಾರ್ ನಿರ್ದೇಶನದ ತಮಿಳು ಚಿತ್ರ “96” ಕನ್ನಡಕ್ಕೆ ಬರುತ್ತಿದೆ. ಅಲ್ಲಿ ತ್ರಿಶಾ ನಾಯಕಿಯಾಗಿ ಜಾನಕಿಯ ಪಾತ್ರದಲ್ಲಿ ಕಂಡರೆ ಕನ್ನಡದಲ್ಲಿ ನಟಿ ಭಾವನಾ ಕಾಣಿಸಿಕೊಳ್ಳಲಿದ್ದಾರೆ.  ನಾಯಕನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮಿಂಚಲಿದ್ದಾರೆ ಈಗಾಗಲೇ ಈ ಚಿತ್ರ ಶೂಟಿಂಗ್ ಮುಗಿದಿದ್ದು ಒಂದು ಲಿರಿಕಲ್ ಹಾಡು ಕೂಡ ಬಿಡುಗಡೆಯಾಗಿದೆ.. ಪ್ರೀತಂ ಗುಬ್ಬಿ ನಿರ್ದೇಶನದ  ‘99’ ಆಡಿಯೋ ಹಕ್ಕುಗಳನ್ನು 50 ಲಕ್ಷ ರುಪಾಯಿಗಳ ಬೆಲೆಗೆ ‘ಆನಂದ್ ಆಡಿಯೋ ಸಂಸ್ಥೆ’ ಪಡೆದುಕೊಂಡಿದೆ.

ಈಗ ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.. ಗಣೇಶ್ ಹಾಗೂ ಭಾವನಾ ಮುಖಾಮುಖಿಯಾಗಿ ನಿಂತಿರುವ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ

 ಗಣೇಶ್ ಮತ್ತು ಭಾವನಾ ಜೋಡಿ

ಗಣೇಶ್ ಮತ್ತು ಭಾವನಾ ಜೋಡಿಯ 2ನೇ ಸಿನಿಮಾ ಇದಾಗಲಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ಮಾಡಿದ್ದ ಪಾತ್ರ ಅಭಿಮಾನಿಗಳನ್ನು ಮತ್ತೊಮ್ಮೆ ಮಗದೊಮ್ಮೆ ಈ ಸಿನಿಮಾವನ್ನು ನೋಡುವಷ್ಟರ ಮಟ್ಟಿಗೆ ಇಷ್ಟವಾಗಿ, ಎಲ್ಲರಿಂದಲೂ ಭಾರೀ ಪ್ರಶಂಸೆಯನ್ನು ಪಡೆಯಿತು. ಇದೇ ಏಪ್ರಿಲ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ..

‘ರಂಗಸ್ಥಳಂ’ ಕನ್ನಡಕ್ಕೆ ರೀಮೇಕ್ !! ವಿತರಣೆ ಹಕ್ಕನ್ನು ಪಡೆದ ಜಾಕ್ ಮಂಜು!!

Tags