ಸುದ್ದಿಗಳು

‘99’ ಚಿತ್ರದ ಟ್ರೇಲರ್ ನೋಡಿ ಕಿಚ್ಚ ಹೇಳಿದ್ದೇನು??

ಬೆಂಗಳೂರು,ಏ.16: ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ‘99’ ಚಿತ್ರವು ಈಗಾಗಲೇ ತನ್ನ ವಿಭಿನ್ನ ಹಾಡುಗಳಿಂದ ಗಮನ ಸೆಳೆಯುತ್ತಿದ್ದು, ಚಿತ್ರದ ಟ್ರೇಲರ್ ಇಂದು ಸಂಜೆ ಬಿಡುಗಡೆಯಾಗಲಿದೆ.. ಈ ಕುರಿತು ಕಿಚ್ಚ ಸುದೀಪ್ ಒಂದು ವಿಡಿಯೋ ಮಾಡಿ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ..

‘99’ ಚಿತ್ರವನ್ನು ನೋಡಿ ನಾನು ಎಂಜಾಯ್ ಮಾಡುತ್ತೇನೆ..

ಕಿಚ್ಚ ‘99’ ಚಿತ್ರದ “ಟ್ರೇಲರ್ ನೋಡಿದ್ದು, 99 ಚಿತ್ರದ ಟ್ರೇಲರ್ ನೋಡಿದಾಗ ‘ಆಟೋಗ್ರಾಫ್’ ಸಿನಿಮಾ ನೆನಪಿಗೆ ಬಂತು, ‘ಆಟೋಗ್ರಾಫ್’ ಮಾಡಿದಾಗ ನನಗೆ ಅದನ್ನು ಎಂಜಾಯ್ ಮಾಡಲು ಆಗಲಿಲ್ಲ ಯಾಕೆಂದರೆ ಆ ಸಿನಿಮಾವನ್ನು ನಾನು ನಿರ್ಮಾಣ ಮಾಡಿದ್ದೆ. ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವುದನ್ನು ಕೇಳಿ ಖುಷಿ ಪಡುತ್ತಿದ್ದೆ. ಹಾಗಾಗಿ ‘99’ ಚಿತ್ರವನ್ನು ನೋಡಿ ನಾನು ಎಂಜಾಯ್ ಮಾಡುತ್ತೇನೆ..

 

ನೀವೂ ಏಪ್ರಿಲ್ 26 ರಂದು ಚಿತ್ರಮಂದಿರಗಳಲ್ಲಿ ನೋಡಿ

ಪ್ರೀತಂ ನೀವು ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದೀರಿ, ಇನ್ನು ನನ್ನ ಗೆಳೆಯ ಗಣೇಶ್ ಅವರದ್ದು ಅಭಿನಯ ಈ ಚಿತ್ರದಲ್ಲಿ ಎಲ್ಲವೂ ಇಷ್ಟವಾಯ್ತು.. ಭಾವನಾ ನನ್ನ ಒಳ್ಳೆಯ ಫ್ರೆಂಡ್ , ಎಂಥಾ ಪಾತ್ರವನ್ನು ಕೊಟ್ಟರೂ ಅದ್ಭುತವಾಗಿ ಮಾಡುತ್ತಾಳೆ..ಅವಳು ಮುಂದೆಯೂ ಸೂಪರ್ ಸಿನಿಮಾಗಳನ್ನು ಮಾಡಬೇಕು.. ಇನ್ನು ಅರ್ಜುನ್ ಜನ್ಯ ಮ್ಯೂಸಿಕ್ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ.. ಖಂಡಿತಾ ನಾನು ಈ ಚಿತ್ರವನ್ನು ನೋಡುತ್ತೇನೆ.. ನೀವೂ ಏಪ್ರಿಲ್ 26 ರಂದು ಚಿತ್ರಮಂದಿರಗಳಲ್ಲಿ ನೋಡಿ” ಎಂದು ಕಿಚ್ಚ ‘99’ ಚಿತ್ರದ ಬಗ್ಗೆ ಮಾತನಾಡಿದ್ದಾರೆ..

ವೈರಲ್ ಆಯ್ತು ಅಮೀರ್ ಖಾನ್ ಮಗಳ ಈ ಫೋಟೋ

Tags