ಸುದ್ದಿಗಳು

ಮತ್ತೆ ಬಂತು ‘ಎ’ ಸಿನಿಮಾ: ಇದು ಧಮ್ ಇದ್ದವರಿಗೆ ಮಾತ್ರ

ಮೂವರು ಹುಡುಗಿಯರು, ಒಬ್ಬ ಹುಡುಗನನ್ನು ರೇಪ್ ಮಾಡುವ ಕಥೆ

ಬೆಂಗಳೂರು.ಮೇ.14: ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ನಾಯಕನಟರಾಗಿ ಕಾಣಿಸಿಕೊಂಡ ಸಿನಿಮಾ ‘ಎ’. 1988 ರಂದು ತೆರೆ ಕಂಡು ಬಾರೀ ಬಿರುಗಾಳಿ ಎಬ್ಬಿಸಿದ್ದ ಈ ಚಿತ್ರವನ್ನು ಸ್ವತಃ ಉಪೇಂದ್ರರವರೇ ನಿರ್ದೇಶನ ಮಾಡಿದ್ದರು. ಅಲ್ಲದೇ ಈ ಚಿತ್ರಕ್ಕೆ ‘ಬುದ್ದಿವಂತರಿಗೆ ಮಾತ್ರ’ ಎಂಬ ಟ್ಯಾಗ್ ಲೈನ್ ಕೂಡಾ ಇತ್ತು.

Image result for "A" Kannada Movie New Trailer 2019

ಇನ್ನು ಒಂದು ಕಡೆ, ಸ್ಯಾಂಡಲ್ ವುಡ್ ನಲ್ಲೀಗ ಹಳೆಯ ಟೈಟಲ್ ನಡಿ ಹೊಸ ಸಿನಿಮಾಗಳು ಬರುತ್ತಿವೆ. ಅದರಂತೆಯೇ ಇದೀಗ ‘ಎ’ ಟೈಟಲ್ ನಡಿ ಸಿನಿಮಾವೊಂದು ಬರುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಮೋಡಿ ಮಾಡುತ್ತಿದೆ.

ಹೌದು, ಇದೀಗ ಮತ್ತೊಮ್ಮೆ ‘ಎ’ ಹೆಸರಿನ ಚಿತ್ರವೊಂದು ಮೂಡಿ ಬರುತ್ತಿದ್ದು, ಚಿತ್ರಕ್ಕೆ ‘ಧಮ್ ಇದ್ದವರಿಗೆ ಮಾತ್ರ’ ಎಂಬ ಟ್ಯಾಗ್ ಲೈನ್ ಇದೆ. ಇನ್ನು ಈ ಚಿತ್ರವು ಹಾರರ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಮೂಡಿ ಬಂದಿದೆ.

ಚಿತ್ರದಲ್ಲಿ ರಚನಾ ದರ್ಶತ್, ರಚನಾ ಗೌಡ ಮತ್ತು ಸ್ವಾತಿ.. ಎಂಬ ಮೂವರು ನಾಯಕಿಯರು ನಟಿಸಿದ್ದಾರೆ. ಹಾಗೆಯೇ  ಈ ಮೂವರು ನಾಯಕಿಯರು ನಾಯಕನ ಮೇಲೆಯೇ ರೇಪ್ ಮಾಡುತ್ತಾರೆ. ಅದು ವಿಭಿನ್ನವಾಗಿ ಮೂಡಿ ಬಂದಿದ್ದು, ಚಿತ್ರಕ್ಕೆ ರಾಘವ ಸೂರ್ಯ ನಾಯಕನಟರಾಗಿ ಅಭಿನಯಿಸಿದ್ದು, ರಾಘವೇಂದ್ರ ಟಿ.ಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಡಾಟರ್ ಆಫ್ ಪಾರ್ವತಮ್ಮ’ ಟ್ರೇಲರ್ ಮೆಚ್ಚಿದ ಅಭಿ!!

#A, #kannada, #new, #movie, #traolor, #balkaninews #upendra, #filmnews, #kannadasuddigalu

Tags

Related Articles