ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ಫೋಟೋ: ಮಾಲೀಕ ಮತ್ತೆ ಬರುವನೆಂದು ಕಾಯುತ್ತ ಕುಳಿತ ನಾಯಿ!

ಮೊದಲಿನಿಂದಲೂ ನಿಷ್ಠೆಗೆ ನಾಯಿ ಹೆಸರುವಾಸಿ. ನಾಯಿಯ ನಿಷ್ಠೆ ಬಗ್ಗೆ ಈಗಾಗಲೇ ಅನೇಕ ಕಥೆಗಳನ್ನು ಕೇಳಿರುತ್ತೇವೆ. ಆದರೆ ಇತ್ತೀಚಿಗೆ ನಾಯಿ ಕುರಿತು ವೈರಲ್ ಆದ ಫೋಟೋ ಹಾಗೂ ವಿಡಿಯೋವೊಂದು ಎಂಥ ಕಲ್ಲು ಹೃದಯವನ್ನು ಕರಗಿಸುತ್ತದೆ.

ಕಳೆದ ಶುಕ್ರವಾರ ಬೆಳಗ್ಗೆ ಥೈಲ್ಯಾಂಡ್ ನ ಚಂತಬುರಿಯಲ್ಲಿ 56 ವರ್ಷದ ಸೋಂಪ್ರಸೊಂಗ್ ಶ್ರೀಥೊಂಗ್ಖುಮ್ ಎಂಬಾತ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಡಿದಾದ ಬಂಡೆಯ ಮೇಲಿಂದ ಜಾರಿ ಬಿದ್ದು ನೀರಿನಲ್ಲಿ ಬಿದ್ದಿದ್ದಾನೆ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.

ಆದರೆ ಮೀ ಎಂಬ ಹೆಸರಿನ ನಿಷ್ಠಾವಂತ ನಾಯಿಗೆ ತನ್ನ ಯಜಮಾನ ನೀರಿನಲ್ಲಿ ಬಿದ್ದು ಸತ್ತುಹೋಗಿರುವುದು ತಿಳಿದಿಲ್ಲ. ಅದು ಆತ ಮತ್ತೆ ಬರುತ್ತಾನೆ ಎಂದು ತಿಳಿದು ಅಲ್ಲೇ ಕಾಯುತ್ತಾ ಕುಳಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಗಮನಿಸಿದರೆ ನಾಯಿಯ ತನ್ನ ಯಜಮಾನ ದಂಡೆಯ ಮೇಲಿಟ್ಟಿರುವ ಟಾರ್ಚ್, ಚಪ್ಪಲಿ ಪಕ್ಕದಲ್ಲಿ ಕೂತಿರುವುದನ್ನು ಗಮನಿಸಬಹುದು.

ಈ ಘಟನೆಯ ವಿಡಿಯೋ ನೋಡಿದ ಕೆಲವರು ನಾಯಿ ನಿಜಕ್ಕೂ ಮನುಷ್ಯನ ಅತ್ಯುತ್ತಮ ಸ್ನೇಹಿತನೇ ಬಿಡಿ ಎಂದು ಪ್ರಶಂಸಿಸುತ್ತಿದ್ದಾರೆ.

A loyal dog waiting by the pond after his owner drowns. (Photo: ViralPress)

ಘಟನೆಯ ವಿವರ

ಬಹಳ ಸಮಯವಾದರೂ ಸೋಂಪ್ರಸೊಂಗ್ ಶ್ರೀಥೊಂಗ್ಖುಮ್ ಬರದಿದ್ದಾಗ ಆತನ ಸೋದರಸಂಬಂಧಿ ಸೊಂಪಾರ್ನ್ ಅವನನ್ನು ಹುಡುಕಲು ಜಮೀನಿನ ಬಳಿ ಹೋದಾಗ ನದಿ ತೀರದಲ್ಲಿ ದುಃಖಿಸುತ್ತಿರುವ ನಾಯಿಯನ್ನು ಮಾತ್ರ ನೋಡಿದಳು.

ನಿರ್ಜನ ಪ್ರದೇಶದಲ್ಲಿ ನಾಯಿಯನ್ನು ನೋಡಿದ ಅವಳು ತಕ್ಷಣವೇ ತನ್ನ ಸೋದರಸಂಬಂಧಿ ಇಲ್ಲೇ ಜಾರಿಬಿದ್ದಿರಬಹುದು ಎಂದು ಭಾವಿಸಿದಳು.

ಶವವನ್ನು ಹುಡುಕಲು ರಕ್ಷಣಾ ತಂಡಕ್ಕೆ  ಕೋರಿದಳು. ಆ ನಂತರ ಸೋಂಪ್ರಸೊಂಗ್ ಅವರ ಮೃತ ದೇಹವನ್ನು ಕಂಡುಹಿಡಿಯಲು 10 ನಿಮಿಷಗಳನ್ನು ತೆಗೆದುಕೊಳ್ಳಲಾಯಿತು.

” ಸೋಂಪ್ರಸೊಂಗ್ ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಿದ್ದಾನೆ. ಅವನಿಗೆ ಹುಷಾರಿಲ್ಲದ ಕಾರಣ ಈ ಘಟನೆ ಸಂಭವಿಸಿರಬಹುದು” ಎಂದು ಸೊಂಪಾರ್ನ್ ಹೇಳಿದ್ದಾರೆ.

ಕಿಚ್ಚನ ಅಡುಗೆಯ ಕೈ ಚಳಕ ವಿಡಿಯೋ ವೈರಲ್

#balkaninews #video #dog #pond

Tags