ಸುದ್ದಿಗಳು

ಪಾಪ್ ಶೈಲಿಯಲ್ಲಿ ಬಂತು ಉಪ್ಪಿಯ ‘ಮಾರಿ ಕಣ್ಣು ಹೋರಿ ಮ್ಯಾಗೆ’!!

ಮಾರಿ ಕಣ್ಣು ಹೋರಿ ಮ್ಯಾಗೆ’ ಹಾಡನ್ನು ‘ಲಗೋರಿ ಬ್ಯಾಂಡ್’ ಕಡೆಯಿಂದ ಪುನಃ ಈಗಿನ ಪಾಪ್ ರಾಕ್ ಶೈಲಿಯಲ್ಲಿ

ಬೆಂಗಳೂರು,ಜ.4: ರಿಯಲ್ ಸ್ಟಾರ್ ಉಪೇಂದ್ರ ರವರು ನಟ, ನಿರ್ದೇಶಕರಾಗಿ ಕೆಲಸ ಮಾಡಿದವರು..  ಇವರು ನಟನಾಗಿ ಆಗಿ ಕೆಲಸ ಮಾಡಿದ ಮೊದಲ ಚಿತ್ರ ‘ಎ’. ಈ ಚಿತ್ರವನ್ನು ಸೂಪರ್ ಹಿಟ್ ಆಗಿತ್ತು.. ಆದರೆ ಜನರಿಗೆ ಮಾತ್ರ ಉಪೇಂದ್ರರ ಲಾಜಿಕ್ ಅರ್ಥವೇ ಆಗಿಲ್ಲ.. ಇದು ಒಂದು ಮಾನಸಿಕ ಮತ್ತು ಪ್ರೀತಿಯ ಎಳೆಯಲ್ಲಿ ಬರೆದ ಕಥೆ ಆಗಿದ್ದು, ಉಲ್ಟಾ ಸ್ಕ್ರೀನ್ ಪ್ಲೇ ಮತ್ತು ಅನೇಕ ಫ್ಲಾಶ್ ಬ್ಯಾಕ್ ಗಳಲ್ಲಿ ರೆಕಾರ್ಡ್ ಆದ ಮೊದಲ ಚಿತ್ರ ಎಂದು ಹೇಳಲಾಗುತ್ತದೆ. ಈ ಸಿನಿಮಾ ವನ್ನು ಮೊದಲ ವೀಕ್ಷಣೆಯಲ್ಲೇ ಅರ್ಥ ಮಾಡಿಕೊಂಡವರು ತುಂಬಾ ವಿರಳ ಅಂತ ನೇ ಹೇಳಬಹುದು.

ಲಗೋರಿ ಬ್ಯಾಂಡ್’

‘ಎ ‘ಚಿತ್ರದ ಹಾಡುಗಳು ತುಂಬಾ ಜನಪ್ರಿಯವಾದವು ಮತ್ತು ಗುರು ಕಿರಣ್ ಎಂಬ ಸಂಗೀತ ನಿರ್ದೇಶಕರನ್ನು ಪರಿಚಿಯಸಿದ ಕ್ರೆಡಿಟ್ಸ್ ಮತ್ತೆ ಉಪೇಂದ್ರ ಅವರಿಗೆ ಸಲ್ಲುತ್ತದೆ. ಇನ್ನು ಈಗ ‘ಮಾರಿ ಕಣ್ಣು ಹೋರಿ ಮ್ಯಾಗೆ’ ಹಾಡನ್ನು ‘ಲಗೋರಿ ಬ್ಯಾಂಡ್’ ಕಡೆಯಿಂದ ಪುನಃ ಈಗಿನ ಪಾಪ್ ರಾಕ್ ಶೈಲಿಯಲ್ಲಿ ಹಾಡಲಾಗಿದೆ. ಇನ್ನು ಈ ತಂಡವು ವಿಶೇಷವಾಗಿ ಉಪೇಂದ್ರ ಅವರಿಗೆ ಈ ಹಾಡನ್ನು ಅರ್ಪಿಸಿದ್ದಾರೆ..ಇದನ್ನು ಉಪೇಂದ್ರ ಅವರು ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಆ ತಂಡಕ್ಕೆ ಶುಭಾಶಯ ಕೋರಿದ್ದಾರೆ..

Tags

Related Articles