ನಾಚಿನೀರಾದ ಜೋಡಿ
ಮದುವೆಯಾದ ಹೊಸ ಜೊಡಿ ಎಂದರೆ ನಾಚಿಕೆ ಇರುವುದು ಸಹಜ. ಲಾಕ್ ಡೌನ್ ಸಮಯದಲ್ಲಿ ಮದುವೆಯಾದ ನಿಖಿಲ್, ಸುಖ ದಾಂಪತ್ಯ ಸವಿಯುತ್ತಿದ್ದಾರೆ. ರೇವತಿಯನ್ನು ತುಂಬಾ ಇಷ್ಟಪಡುವ ನಿಖಿಲ್ ಅನುಶ್ರೀ ಮಾಡಿದ ಸಂದರ್ಶನದಲ್ಲೂ ರೇವತಿ ಬಗ್ಗೆ ಹೊಗಳಿ ಮಾತನಾಡಿದ್ದಾರೆ.
ಈಗ ನಿಖಿಲ್ ರೇವತಿಯ ಹೊಸ ಕ್ಯಾಂಡಿಡ್ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ನವ ಜೋಡಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳ್ಳಿಸುತ್ತಿರುವ ಕ್ಯಾಂಡಿಡ್ ವಿಡಿಯೋ ಶೇರ್ ಮಾಡಿದ್ದಾರೆ. ಹಸಿರು ರೇಶ್ಮೆ ಸೀರೆಯಲ್ಲಿ ರೇವತಿ ಹಾಗೂ ಕ್ರೀಮ್ ಕಲರ್ ಶರ್ಟ್‌ನಲ್ಲಿ ನಿಖಿಲ್ ಮಿಂಚುತ್ತಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಒಂದು ಮಜವಾದ ಕ್ಯಾಂಡಿಡ್ ವಿಡಿಯೋ ವೈರಲ್ ಆಗುತ್ತಿದೆ.
ಮೆಟ್ಟಿಲು ಮೇಲೆ ಕೂತು ಒಬ್ಬರನ್ನೊಬ್ಬರು ನೋಡಿ ನಾಚಿಕೊಳ್ಳುತ್ತಿರುವ ನಿಖಿಲ್ ಮತ್ತು ರೇವತಿ ವಿಡಿಯೋ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಿಖಿಲ್ ನಾಚಿಕೊಂಡ ಮುದ್ದಾದ ಪೋಸ್ ಗೆ ರೇವತಿ ನೋಡಿ ನಕ್ಕ ಕ್ಯಾಂಡಿಡ್ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಭಾರಿ ಸದ್ದು ಮಾಡುತ್ತಿದೆ.