ಸುದ್ದಿಗಳು

ಡೈಲಾಗ್ ಕಿಂಗ್ ಸಾಯಿಕುಮರ್ ಪುತ್ರನೊಂದಿಗೆ ಡ್ಯುಯೆಟ್ ಆಡಲಿರುವ ಯೂಟರ್ನ್ ಬೆಡಗಿ

ಬೆಂಗಳೂರು, ಏ.11:

ಯೂ ಟರ್ನ್ ಮೂಲಕ ಮನೆ ಮಾತಾಗಿರುವ ಶ್ರದ್ಧಾ ಶ್ರೀನಾಥ್ ನಟಿಸಿರುವ ತೆಲುಗು ಚಿತ್ರ ಜೆರ್ಸಿ ಇದೇ ತಿಂಗಳು 19 ರಂದು ತೆರೆ ಕಾಣಲು ತಯಾರಾಗಿದೆ. ಇದೀಗ ಮತ್ತೊಂದು ತೆಲುಗು ಚಿತ್ರಕ್ಕೆ ಶ್ರದ್ಧಾ ಆಯ್ಕೆಯಾಗಿದ್ದಾರೆ.

ಬಹುಭಾಷಾ ನಟ ಸಾಯಿಕುಮಾರ್ ಅವರ ಪುತ್ರ ಆದಿ ಸಾಯಿಕುಮಾರ್ ಅಭಿನಯದ ‘ಜೋಡಿ’ ಸಿನಿಮಾದಲ್ಲಿ ನಾಯಕಿಯಾಗಿ ಶ್ರದ್ಧಾ ನಟಿಸಲಿದ್ದಾರೆ.

ಜೋಡಿ ಚಿತ್ರದ ಫಸ್ಟ್ಲುಕ್ ಇತ್ತೀಚೆಗೆ ರಿಲೀಸ್ ಆಗಿದ್ದು, ಫಸ್ಟ್ ಲುಕ್ ನಲ್ಲಿ ಆದಿ ಮತ್ತು ಶ್ರದ್ಧಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಿಶ್ವನಾಥ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಫಣಿ ಕಲ್ಯಾಣ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ಶೂಟಿಂಗ್ ಯಾವಾಗ ಶುರುವಾಗಲಿದೆ ಮತ್ತು ಚಿತ್ರತಂಡದಲ್ಲಿ ಯಾರೆಲ್ಲ ಇದ್ದಾರೆ ಎಂಬುದರ ಕುರಿತು ಸದ್ಯ ಯಾವುದೇ ಮಾಹಿತಿ ಇಲ್ಲ.

ಶ್ರದ್ಧಾ ಶ್ರೀನಾಥ್  ಅಭಿನಯದ ಚೊಚ್ಚಲ ಹಿಂದಿ ಚಿತ್ರ ‘ಮಿಲನ್ ಟಾಕೀಸ್’ ತೆರೆಕಂಡಿತ್ತು. ಉಳಿದಂತೆ ಕನ್ನಡದಲ್ಲಿ ‘ರುಸ್ತುಂ’ ಸೇರಿ ಅವರ ಬಹಳಷ್ಟು ಸಿನಿಮಾಗಳು ತೆರೆಗೆ ಬರಲು ತಯಾರಾಗಿವೆ.

“ಶ್ವೇತ” ಸುಂದರಿ…

#shraddhashrinath #balkaninews #tollywood #saikumar #aadisaikumar #telugumovies #saikumarson

Tags