ಸುದ್ದಿಗಳು

ಈಫೆಲ್ ಟವರ್ ಮುಂದೆ ಲಿಪ್ ಲಾಕ್ ಮಾಡಿದ ‘ಪೈಲ್ವಾನ್’ ಬೆಡಗಿ…..

ದೇಶದ ಸುಂದರ ತಾಣಗಳಲ್ಲೊಂದು ಪ್ಯಾರೀಸ್. ಇಲ್ಲಿಗೆ ಹೋಗಲು ಅದೆಷ್ಟೋ ಮಂದಿ ಕನಸು ಹೊತ್ತಿರುತ್ತಾರೆ. ಜೀವನದಲ್ಲಿ ಒಂದು ಸಲವಾದ್ರು ಈ ಪ್ರದೇಶಕ್ಕೆ ಹೋಗಬೇಕು ಅಲ್ಲಿನ ಈಫೆಲ್ ಟವರ್ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಆಸೆ ಅದೆಷ್ಟೋ ಮಂದಿಗೆ. ಈ ಕನಸಿಗೆ ಸಿನಿಮಾ ಮಂದಿ ಹೊರತಾಗಿಲ್ಲ. ಪೈಲ್ವಾನ್ ಹೀರೋಯಿನ್ ತಮ್ಮ ಗೆಳೆಯನ ಜೊತೆ ಈಫೆಲ್ ಟವರ್ ಬಳಿ ಸಮಯ ಕಳೆದಿದ್ದಾರೆ.

ಬಹುಬೇಗ ಪ್ರಖ್ಯಾತಿ ಪಡೆದ ನಟಿ

ಹೌದು, ಆಕಾಂಕ್ಷ ಸಿಂಗ್ ಸಿರೀಯಲ್‌ ಗಳಿಂದ ಬಹುಬೇಗ ಪ್ರಖ್ಯಾತಿ ಪಡೆದವ್ರು. ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರೋ ಆಕಾಂಕ್ಷ ಈಗ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಾ ಇದ್ದಾರೆ. ಪೈಲ್ವಾನ್ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿ ಈಗ ಪತಿ ಕುಮಾಲ್ ಜೊತೆಗೆ ಯೂರೋಪ್ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ, ಇವರು ಫ್ರೆಂಡ್ ಶಿಪ್ ಡೇ ದಿನ ತಮ್ಮ ಪತಿ ಜೊತೆ ಪ್ಯಾರಿಸ್‌ನ ಈಫೆಲ್ ಟವರ್ ಮುಂದೆ ನಿಂತು ಲಿಪ್‌ಲಾಕ್ ಮಾಡಿದ್ದಾರೆ.ತೆಲುಗಿನಲ್ಲಿ ಸ್ಥಾನ ಪಡೆದ ಆಕಾಂಕ್ಷ

ತಮ್ಮ ಬಹುಕಾಲದ ಬಾಯ್‌ಫ್ರೆಂಡ್ ಕುಮಾಲ್ ಸೇನ್ ಜೊತೆಗೆ ೨೦೧೪ರಲ್ಲೇ ವಿವಾಹವಾಗಿದ್ದರು ಆಕಾಂಕ್ಷ ಸಿಂಗ್. ಸದ್ಯ ಪೈಲ್ವಾನ್ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಪೈಲ್ವಾನ್ ಸಿನಿಮಾ ಬಳಿಕ ಟಾಲಿವುಡ್‌ ನ ಬಹುನಿರೀಕ್ಷಿತ ಸಿನಿಮಾ ದೇವದಾಸುಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಹಾಗು ನಾನಿ ಅಭಿನಯದ ಸಿನಿಮಾ ದೇವದಾಸುನಲ್ಲಿ ನಾಗಾರ್ಜುನ ಜೋಡಿಯಾಗಿ ಆಕಾಂಕ್ಷ ಕಾಣಿಸಿಕೊಳ್ಳಲಿದ್ದಾರೆ.ಪೈಲ್ವಾನ್ ಚಿತ್ರತಂಡ

ಪೈಲ್ವಾನ್ ಚಿತ್ರವನ್ನ ಈ ಹಿಂದೆ ಹೆಬ್ಬುಲಿ ಎಂಬಂತಹ ಬ್ಲಾಕ್ ಬಸ್ಟರ್ ಚಿತ್ರಕ್ಕೆ ನಿರ್ದೇಶನ ಮಾಡಿದಂತಹ ಕೃಷ್ಣ ಈ ಫೈಲ್ವಾನ್‌ ಗೆ ಮತ್ತೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೋಂದು ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಕೃಷ್ಣ ಪ್ರೋಡಕ್ಷನ್ ಕೂಡಾ ಶುರು ಮಾಡ್ತಿದ್ದಾರೆ. ಕಬೀರ್ ಬಾಲಿವುಡ್ ನಟ ಬಹು ಭಾಷಾ ನಟನಾಗಿದ್ದು ಈಗ ಸ್ಯಾಂಡಲ್‌ ವುಡ್ ಫೈಲ್ವಾನ್‌ ಗೆ ಎದುರಾಳಿಯಾಗಿ ಚಿತ್ರದಲ್ಲಿ ಸೆಣಸಾಡಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Tags

Related Articles