ಸುದ್ದಿಗಳು

ಅಮೀರ್ ಖಾನ್ ಗೆ ಸೋಷಿಯಲ್ ಮೀಡಿಯಾದ ಬಗ್ಗೆ ಜ್ಞಾನವಿಲ್ಲವಂತೆ…!

ಮುಂಬೈ, ಜ.11: ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಫಾತಿಮಾ ಸಾನಾ ಸೈಕ್, ಯಶ್ ರಾಜ್ ಫಿಲ್ಮಂ ಅಡಿಯಲ್ಲಿ ಮೂಡಿ ಬಂದ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಮೂಲಕ, ಬಾಲಿವುಡ್ ಬಿಗ್ ಬಿ ಅಮಿತಾಬ್, ಅಮೀರ್ ಖಾನ್ ಜೊತೆಗೆ ತೆರೆ ಹಂಚಿಕೊಳ್ಳುವ ಮತ್ತೊಂದು ಅತ್ಯುತ್ತಮ ಅವಕಾಶವನ್ನು ಬಾಚಿಕೊಂಡರು. ಅಮೀರ್ ಖಾನ್ ಗೆ ಕೊಂಚ ಹತ್ತಿರವೇ ಇರುವ ಈ ಫಾತಿಮಾ, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ರಾಣಿಯಾಗಿ ಕಾಣಿಸಿಕೊಂಡು ಗಮನ ಸೆಳೆದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಫಾತೀಮಾ, ಅಮಿತಾಬ್ ಬಚ್ಚನ್ ಅವರು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಶೂಟಿಂಗ್ ಗಾಗಿ ಚಿತ್ರೀಕರಣದ ಸೆಟ್ ಗೆ ತೆರಳಿದ್ದ ಸಂದರ್ಭದಲ್ಲಿ , ನಾನು ಬಿಗ್ ಬಿ ಗೆ ನನ್ನ ನಾನು ಪರಿಚಯಿಸಿಕೊಂಡೆ. ಬಿಗ್ ಬಿ ಅವರಲ್ಲಿ ಎರಡು ಫೋನ್ ಇದೆ, ಎರಡು ಮ್ಯೂಸಿಕ್ ಸಿಸ್ಟಮ್ ಇದೆ, ಒಂದು ಪ್ಯಾನ್ಸಿ ಲ್ಯಾಪ್ ಟಾಪ್ ಇದೆ. ಅವರೇ ಹಾಡಿದ ಹಾಡೊಂದನ್ನು ಬಿಗ್ ಬಿ ಪ್ಲೇ ಮಾಡಿ ತೋರಿಸಿದರು. ಅಂದಹಾಗೆ ಬಿಗ್ ಬಿ ತಾವೇ ಹಾಡುತ್ತಾ ಅದನ್ನು ರೆಕಾರ್ಡ್ ಮಾಡಿಕೊಂಡು, ಬಂದವರಿಗೆ ಪ್ಲೇ ಮಾಡಿತೋರಿಸುತ್ತಾರೆ. ಅವರದ್ದು ಒಂಥಾರ ಮಗುವಿನಂತ ಮನಸ್ಸು ಎಂದರು.ಬಿಗ್ ಬಿ ಮಗುವಿನಂತೆ, ತಾವೇ ಹಾಡಿದ ಹಾಡುಗಳನ್ನು ರೆಕಾರ್ಡ್ ಮಾಡಿ ಪ್ಲೇ ಮಾಡಿ ಖುಷಿ ಪಡುತ್ತಾರೆ

ಬಿಗ್ ಬಿ ಅವರದ್ದು ಒಂಥಾರ ಮಗುವಿನ ಸ್ವಾಭಾವ. ನಾನು ನೋಡಿದಂತೆ ಅವರು ಚಿತ್ರೀಕರಣದ ಸ್ಥಳದಲ್ಲಿ ಜೋಶ್ ಆಗಿರುತ್ತಾರೆ. ತಾವೇ ಹಾಡಿದ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಅಮೇಲೆ ಅದನ್ನು ಪ್ಲೇ ಮಾಡಿ ತೋರಿಸುತ್ತಾ ಆನಂದಿಸುತ್ತಾರೆ ಎಂದಿರುವ ಫಾತೀಮಾ, ಅಮೀರ್ ಖಾನ್ ಕುರಿತ ರಹಸ್ಯವೊಂದನ್ನು ಹೇಳಿಕೊಂಡಿದ್ದಾರೆ. ಅಮೀರ್ ಖಾನ್ ಸಿನಿಮಾದಲ್ಲಿ ಮಿಸ್ಟರ್ ಫರ್ಪೆಕ್ಟ್ ಆಗಿದ್ದರೂ, ಅವರಿಗೆ ಸೋಷಿಯಲ್ ಮೀಡಿಯಾವನ್ನು ಹೇಗೆ ಹ್ಯಾಂಡಲ್ ಮಾಡುವುದು ಎಂದು ತಿಳಿದಿಲ್ಲವಂತೆ.ಈ ವಿಚಾರದಲ್ಲಿ ಅಮೀರ್ ಸಿಕ್ಕಾಪಟ್ಟೆ ಹಿಂದೆ ಉಳಿದಿದ್ದಾರೆ ಎಂದಿರುವ ಫಾತೀಮಾ, ಬಚ್ಚನ್ ಸಾರ್ ಇದರಲ್ಲಿ ಸಿಕ್ಕಾಪಟ್ಟೆ ಫಾರ್ವರ್ಡ್ ಆಗಿದ್ದಾರೆ. ಅವರು ಸಾಮಾಜಿಕ ಜಾಲತಾಣವನ್ನು ಇಷ್ಟಪಡುತ್ತಾರೆ ಹೀಗಾಗಿ ಅವರಿಗೆ ಇದೆಲ್ಲಾ ಸುಲಭವಾಗಿದೆ. ನಾವು ಏನೇ ಕೆಲಸ ಮಾಡಿದರೂ ಅದನ್ನು ಪ್ರೀತಿಯಿಂದ ಮಾಡಿದರೆ ಯಾವುದು ಕಠಿಣವಲ್ಲ ಎಂಬುದು ಅಮಿತಾಬ್ ಅವರಿಂದ ನಾನು ತಿಳಿದುಕೊಂಡೆ ಎಂದಿರುವ ಫಾತಿಮಾ, ಅವರ ಕೆಲವೊಂದು ವಿಚಾರಗಳನ್ನು ನನಗೆ ಸಿಕ್ಕಾಪಟ್ಟೆ ಸ್ಪೂರ್ತಿಯಾಗಿದೆ ಎಂದಿದ್ದಾರೆ. ಫಾತಿಮಾ ಸದ್ಯಕ್ಕೆ ಅನುರಾಗ್ ಬಸು ಅವರ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದು, ರಾಜ್ ಕುಮಾರ್ ರಾವ್ ಅವರು ಫಾತಿಮಾಗೆ ಜೋಡಿಯಾಗಿದ್ದಾರೆ.

#bollywood #fatimasanashaikh #bollywood2019 #aamirkhan #thungsofhindostan #balkaninews

Tags