ಸುದ್ದಿಗಳು

ಬಾಲಿವುಡ್ ಪ್ರವೇಶಿಸಲಿರುವ ಅಮೀರ್ ಖಾನ್ ಪುತ್ರಿ..! ಯಾರು ಆ ಚೆಲುವೆ ಗೊತ್ತೇ..?

ಮುಂಬೈ, ಫೆ.11:

ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ಸ್ ಗಳ ಚೊಚ್ಚಲ ಪ್ರವೇಶದ ಕಥೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತಿದೆ. ಅನೇಕ ಸ್ಟಾರ್ ತಾರೆಯರ ಮಕ್ಕಳು ಈಗಾಗಲೇ ಬಾಲಿವುಡ್ ನಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಅಮೀರ್ ಖಾನ್ ಪುತ್ರಿ ಇರಾ. 22 ವರ್ಷ ವಯಸ್ಸಿನ ಈ ಹುಡುಗಿ ಬಾಲಿವುಡ್ ನಲ್ಲಿ ಅಪ್ಪನಂತೆ ಮಿಂಚಲು ರೆಡಿಯಾಗಿದ್ದಾಳೆ. ಈಗಾಗಲೇ ಈಕೆ ಬಹಳಷ್ಟು ಸಕ್ರಿಯಳಾಗಿ ಬಿಟ್ಟಿದ್ದಾಳೆ. ಅಲ್ಲದೇ ಅನೇಕ ಬಾಲಿವುಡ್ ವ್ಯಕ್ತಿಗಳಿಂದ ಮೆಚ್ಚುಗೆ ಕೂಡಾ ಗಳಿಸಿದ್ದಾಳೆ.

ಇರಾ ಖಾನ್ ಈಗಂತೂ ಜಿಮ್ ನಲ್ಲಿ ಬಹಳಷ್ಟು ವರ್ಕ್ ಔಟ್ ಮಾಡುತ್ತಿದ್ದಾಳೆ. ಶೀಘ್ರದಲ್ಲೇ ಈಕೆ ತನ್ನ ತಂದೆ ಅಮೀರ್ ಖಾನ್ ನಿರ್ಮಾಣದ ಚಿತ್ರದ ಮೂಲಕ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಲಿದ್ದಾಳೆ.

ಇರಾ ಖಾನ್ ಮಾಧ್ಯಮದ ಕಣ್ಣುಗಳಿಂದ ಬಹಳ ದೂರವಿದ್ದಾರೆ. ಇತ್ತೀಚಿಗೆ ಈಕೆ ತನ್ನ ಸ್ನೇಹಿತರೊಂದಿಗೆ ಕಾಣಿಸಿಕೊಂಡ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ಅಲ್ಲದೇ ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದಾಳೆ‌. ಈಕೆ ತನ್ನ ತಂದೆ ಜೊತೆಗಿರುವ ಫೋಟೋ ಮತ್ತು ಕೆಲವು ಹಿರಿಯ ಬಾಲಿವುಡ್ ನಟರ ಜೊತೆಗಿರುವ ಛಾಯಾಚಿತ್ರಗಳು ತುಂಬಾ ವೈರಲ್ ಆಗಿವೆ. ಈ ಹಿಂದೆ ಸಲ್ಮಾನ್ ಖಾನ್ ರೊಂದಿಗೆ ಈಕೆ ಇದ್ದ ಚಿತ್ರಗಳು ಸಹ ಹೆಚ್ಚಿನ ಗಮನ ಸೆಳೆದಿದ್ದವು. ಅಂದಹಾಗೇ ಅಮೀರ್ ಖಾನ್ ರ ಮೊದಲ ಹೆಂಡತಿ ರೀನಾ ದತ್ತಾರ ಪುತ್ರಿಯೇ ಈ ಇರಾ. ಅಮೀರ್ ಖಾನ್ ಮತ್ತು ರೀನಾ ದತ್ತಾರ ಬಹಳ ಹಿಂದೆಯೇ ವಿಚ್ಛೇದನ ಪಡೆದಿದ್ದರು. ಇರಾ ತುಂಬಾ ಸುಂದರವಾದ ಹುಡುಗಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈಕೆಗೆ ಬಹಳಷ್ಟು ಮಂದಿ ಅಭಿಮಾನಿ ಇದ್ದಾರೆ.

ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುದ್ದಕ್ಕೆ ಕಾರಣ ನೀಡಿದ ಅಮೀರ್ ಖಾನ್

#aamirkhan #bollywood #aamirkhan #aamirkhandaughterirakhan #irakhaninstagram #aamirkhan

Tags