ಸುದ್ದಿಗಳು

ವೈರಲ್ ಆಯ್ತು ಅಮೀರ್ ಖಾನ್ ಮಗಳ ಈ ಫೋಟೋ

ಮುಂಬೈ, ಏ.15:

‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಖ್ಯಾತಿ ಪಡೆದಿರುವ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಯುವಕನೊಬ್ಬನ ಜೊತೆಗೆ ಇರಾ ಇರುವ ಖಾಸಗಿ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಲಾವಿದ ಹಾಗೂ ಸಂಗೀತ ಸಂಯೋಜಕರಾಗಿರುವ ಮಿಶಾಲ್ ಕಿರ್ಪಲಾನಿ ಜೊತೆ ಇರಾ ಖಾನ್ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಅದು ಸುದ್ದಿಯಾಗುವುದಕ್ಕೆ ಕಾರಣವಿದೆ. ಅವರು ತೀರಾ ಆತ್ಮೀಯ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನು  ನೋಡಿದವರು ಅವರಿಬ್ಬರೂ ಖಂಡಿತ ಡೇಟಿಂಗ್ ಮಾಡುತ್ತಿರಬಹುದೆಂದು ಊಹಿಸುತ್ತಿದ್ದಾರೆ.

ಸ್ವಲ್ಪ ದಿನಗಳ ಮೊದಲು ಕೂಡ ಈ ಜೋಡಿ ಜೊತೆಗಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.  ಅದಕ್ಕೆ ಬಂದಂತಹ ವಿಭಿನ್ನ ಕಾಮೆಂಟ್‌ ಗಳು ನೋಡಿದ ಇರಾ ತಂದೆ ಅಮೀರ್ ಖಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಫೋಟೋಕ್ಕೆ ಅಮೀರ್ ಖಾನ್ ಅದೇನು ಹೇಳುತ್ತಾರೆ ಕಾದು ನೋಡಬೇಕಷ್ಟೇ.

 

View this post on Instagram

 

Charmer😘

A post shared by Mishaal kirpalani (@mishaalkirpalani) on

ಪಾತ್ರಗಳಲ್ಲೇ ‘ಧನ್ಯ’ತೆ ಕಂಡ ದೀಪಿಕಾ

#aamirkhan #aamirkhanmovies #bollywood #hindimovies #irakhan #aamirkhandaughterirakhan

Tags