ಸುದ್ದಿಗಳು

ಕೊನೆಗೂ ಡೇಟಿಂಗ್ ವಿಷಯ ಬಾಯ್ಬಿಟ್ಟ ಅಮೀರ್ ಖಾನ್ ಪುತ್ರಿ ಇರಾ ಖಾನ್…!!

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಬಾಲಿವುಡ್ ಕಂಡ ಪ್ರತಿಭಾವಂತ ನಟರಲ್ಲಿ ಒಬ್ಬರು. ಸದ್ಯ ಅಮೀರ್ ಪುತ್ರಿ ಇರಾ ಖಾನ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹುಡಗನೊಬ್ಬನ ಜೊತೆಗಿರುವ ಫೋಟೋವನ್ನುಅಪ್ ಲೋಡ್ ಮಾಡಿದ್ದರು.

ಬೀಚ್ ಬಳಿ ಇಬ್ಬರೂ ಸ್ವಿಮಿಂಗ್ ಸೂಟ್‌ನಲ್ಲಿ ಒಟ್ಟಾಗಿರುವ ಫೋಟೋ, ಆತನೊಂದಿಗೆ ಕಿಸ್ಸಿಂಗ್ ಫೋಟೋ… ಹೀಗೆ ಫೋಟೋಗಳು ಅಪ್ ಲೋಡ್ ಆಗುತ್ತಲೇ ಇದ್ದವು. ಆದರೆ ಆತ ಯಾರೆಂದು ತಿಳಿದುಬಂದಿರಲಿಲ್ಲ. ಆದರೆ ಫೋಟೋ ನೋಡಿದವರು ಇರಾ ಖಾನ್ ಮತ್ತು ಆ ಹುಡುಗ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಹಾಗೆ ಹೀಗೆ ಎಂದೆಲ್ಲಾ ಹೇಳುತ್ತಿದ್ದರು. ಕೊನೆಗೆ ಆತನ ಹೆಸರು ಮಿಶಾಲ್ ಕಿರ್ಪಲಾನಿ, ಮೂಲತಃ ನ್ಯೂಯಾರ್ಕ್ ಆಕ್ಟರ್ ಆಂಡ್ ಮ್ಯೂಸಿಕ್ ಕಂಪೋಸರ್ ಎಂಬ ವಿಷಯ ತಿಳಿದು ಬಂತು.

ಈಗ ಮತ್ತೊಂದು ಸುದ್ದಿ ರಿವೀಲ್ ಆಗಿದೆ. ಇರಾ ಮಿಶಾಲ್ ಜೊತೆ ಡೇಟಿಂಗ್ ಮಾಡುತ್ತಿರುವುದು ನಿಜವಂತೆ. ಸ್ವತಃ ಇರಾ ಈ ವಿಷಯವನ್ನು ಇನ್ ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ. ಹಾಗೆಯೇ ತಬ್ಬಿಕೊಂಡು ಮುತ್ತಿಡುತ್ತಿರುವ ಫೋಟೋವನ್ನು ಇರಾ ಹುಟ್ಟುಹಬ್ಬದಂದು ಶೇರ್ ಮಾಡಿರುವ ಗೆಳೆಯ ಮಿಶಾಲ್, ಭಾವನಾತ್ಮಕವಾದ ಸಂದೇಶವನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಡೇಟಿಂಗ್ ಜೊತೆ ಪ್ರೀತಿಯನ್ನು ಇಷ್ಟು ಸಿರಿಯಸ್ಸಾಗಿ ತೆಗೆದದುಕೊಂಡಿರುವುದಕ್ಕೆ ಕೆಲವರ ಹುಬ್ಬೇರುವಂತೆ ಮಾಡಿದೆ.

‘ತಳಪತಿ 63’ ಚಿತ್ರಕ್ಕೆ ಹಿರೋಯಿನ್ ಸಿಕ್ಕಾಯ್ತು, ಯಾರು ಗೊತ್ತಾ?

#balkaninews #amirkhan #irakhan #dating #irakhaninstagram #irakhantwitter

Tags