ಸುದ್ದಿಗಳು

‘ಹವಾಜು ಹಾಕೋರ್ ಮುಂದೆ ಕಾಲರ್ ಎತ್ಕೊಂಡು ಹೋಗು’ : ‘ಸಿಂಗ’ ಚಿತ್ರದ ಖಡಕ್ ಸಾಂಗ್

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟಸಿರುವ ‘ಸಿಂಗ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೇ ವೇಳೆಗೆ ಚಿತ್ರದ ಖಡಕ್ ಸಾಂಗ್ ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಆನಂದ್ ಆಡಿಯೋ ಸಂಸ್ಥೆ ಹೊರ ತಂದಿರುವ ‘ಆಟ ಹಾಕು’ ಎಂಬ ಸಾಲುಗಳನ್ನು ಒಳಗೊಂಡ ಈ ಹಾಡನ್ನು ‘ಭರ್ಜರಿ’ ಚೇತನ್ ಕುಮಾರ್ ರಚಿಸಿದ್ದಾರೆ. ಧರ್ಮ ವಿಶ್ ಸಂಗೀತ ಸಂಯೋಜನೆಯಲ್ಲಿ ಈ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿ ನೀಡಿದ್ದಾರೆ.

ಈ ಹಿಂದೆ ‘ಶ್ಯಾನೆ ಟಾಪಾಗವ್ಳೇ’ ಮತ್ತು ‘ಶಿವ ಶಿವ’ ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಸಿಂಗ’ ಚಿತ್ರವು ಇದೀಗ ‘ಆಟ ಹಾಕು’ ಹಾಡಿನ ಮೂಲಕ ಮತ್ತೆ ಗಮನ ಸೆಳೆಯುತ್ತಿದೆ. ಹಾಡಿನ ಸಾಳುಗಳೆ ತಿಳಿಸುವಂತೆ ಇಲ್ಲಿ ದೌಲತ್ತು ಇದ್ದವನದೇ ದರ್ಬಾರು..!!!

ಚಿತ್ರದ ಬಗ್ಗೆ ಹೇಳುವುದಾದರೆ, ತಾರಾ, ಶಿವರಾಜ್ ಕೆ.ಆರ್.ಪೇಟೆ, ರವಿಶಂಕರ್, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವು ವಿಜಯ್ ಕಿರಣ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಉದಯ್ ಕೆ.ಮೆಹ್ತಾ ನಿರ್ಮಾಣ ಮಾಡಿದ್ದಾರೆ.

ಕಿರುತೆರೆಯಲ್ಲೂ ಬಂತು “ನಾನು ನನ್ನ ಕನಸು”

#aatahaaku #lyrical #songs #released #balkaninews #singa, #chirusarja #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags