ಸುದ್ದಿಗಳು

ಸದ್ದು ಮಾಡುತ್ತಿರುವ #ಮಿಟೂ ಬಗ್ಗೆ ಅಭಯ್ ಡಿಯೋಲ್ ಹೇಳಿದ್ದೇನು ?

ಬಾಲಿವುಡ್ ನ ಜನಪ್ರಿಯ ನಟ ಅಭಯ್ ಡಿಯೋಲ್

ಮುಂಬೈ, ನ.08: ದೇಶಾದ್ಯಂದ ಹೆಚ್ಚು ಸುದ್ದಿಯಲ್ಲಿರುವ ಹಾಗೂ ಸದ್ದು ಮಾಡುತ್ತಿರುವ #ಮಿಟೂ ಅಭಿಯಾನದಿಂದಾಗಿ ಹಲವು ಮಂದಿ ಘಟಾನುಘಟಿಗಳ ಹೆಸರು ಹೊರಹೊಮ್ಮಿದ್ದು, ಈಗಾಗಲೇ ಪ್ರಮುಖ ನಟ ನಾನಾಪಾಟೇಕರ್, ನಿರ್ದೇಶಕ ಸಾಜೀದ್ ಖಾನ್, ರಜ್ ಪೂತ್ ಕಪೂರ್ ಶುಭಾಶ್ ಗೈ ಮತ್ತು ವಿಕಾಸ್ ಬಾಲ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈ ನಡುವೆ ನಟ ಸಲ್ಮಾನ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದು, ನಟಿಯರಾದ ಸೋನಂ ಕಪೂರ್, ಸ್ವರ ಭಾಸ್ಕರ್ ಮತ್ತು ರಿಚಾ ಚಡ್ಡಾ #ಮಿಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಅಭಯ್ ಡಿಯೋಲ್ ಪ್ರತಿಕ್ರಿಯೆ ನೀಡಿದ್ದು, #ಮಿಟೂ ಇಷ್ಟೊಂದು ಪ್ರಬಲವಾಗಲು ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ.

 ದೇಶದಲ್ಲಿ ಕಾನೂನು ವ್ಯವಸ್ಥೆ ನಿಧಾನಗತಿಯಲ್ಲಿ ಸಾಗುತ್ತಿದೆ

ದೇಶದಲ್ಲಿನ ಕಾನೂನು ವ್ಯವಸ್ಥೆ ನಿಧಾನಗತಿಯಲ್ಲಿಸಾಗುತ್ತಿರುವ ಕಾರಣ, #ಮಿಟೂ ಅಂತಹ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಜನರು ಸಾಮಾಜಿಕ ಜಾಲತಾಣದ ಮೂಲಕ  ಬಹಿರಂಗಪಡಿಸುತ್ತಿದ್ದಾರೆ. ಜನರು ಧ್ವನಿ ಎತ್ತುತ್ತಿರುವುದು ಅತ್ಯುತ್ತಮ ಬೆಳವಣಿಗೆಯಾಗಿದ್ದು, #ಮಿಟೂ ಅಭಿಯಾನ ಬದಲಾವಣೆಯ ಗಾಳಿಯನ್ನು ಬೀಸುವಂತೆ ಮಾಡಿದೆ. ಆದರೆ ಈ ಅಭಿಯಾನ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವ ಜವಾಬ್ದಾರಿ ಕೂಡ ನಮ್ಮ ಮೇಲೆ ಇದೆ ಎಂದವರು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಈ ವಿಚಾರ ಮೊದಲು ವಿಚಾರಣೆಯಾಗಿ ಬಳಿಕ ಸುದ್ದಿ ಮಾಧ್ಯಮಗಳ ಮೂಲಕ ಜನರಿಗೆ  ಬಹಿರಂಗವಾಗುವುದು ಐಡಿಯಲ್ ವೇ ಆಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ, ಸುಖಾಸುಮ್ಮನೆ  ಆರೋಪ ಎದುರಿಸುವುದು ತಪ್ಪುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ಅಭಯ್ ಡಿಯೋಲ್.

Tags