ಸುದ್ದಿಗಳು

ವಿದೇಶದಿಂದ ಚಿತ್ರೀಕರಣ ಮುಗಿಸಿ ಬಂದ ಅಭಿಗೆ ಅದ್ದೂರಿ ಸ್ವಾಗತ

ಬೆಂಗಳೂರು, ಫೆ.19:

ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’ ಸಿನಿಮಾ ಈಗಾಗಲೇ ಬಾರೀ ನಿರೀಕ್ಷೆ ಹುಟ್ಟು ಹಾಕಿದೆ. ‘ಮೈನಾ’ ಖ್ಯಾತಿಯ ನಾಗಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡ್ತಿದ್ದು, ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡ್ತಿದ್ದಾರೆ. ಅಭಿಗೆ ಜೋಡಿಯಾಗಿ ತಾನ್ಯ ಹೋಪ್ ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಭಿಗೆ ಅಭಿಮಾನಿಗಳಿಂದ ಪ್ರೀತಿ

ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಇದೀಗ ಈ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಲೂ ಕೂಡ ಸಕ್ಕತ್ ರೆಸ್ಪಾನ್ಸ್ ಬಂದಿತ್ತು. ಇನ್ನು ಅದೇ ಗತ್ತು, ಅದೇ ತಾಕತ್ತು, ಅಭಿ ರೂಪದಲ್ಲಿ ಅಂಬರೀಶ್ ಅಣ್ಣ ಮತ್ತೆ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಂತ ‘ಅಮರ್’ ಟೀಸರ್ ನೋಡಿದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅಭಿಗೆ ಮತ್ತೊಂದು ರೀತಿಯಲ್ಲಿ ಅಭಿಮಾನಿಗಳು ಅಭಿಮಾನವನ್ನು ತೋರಿಸಿದ್ದಾರೆ‌.

ಪೇಟ ಹಾಕಿ ಸಂಭ್ರಮಾಚರಣೆ

ಹೌದು, ಇತ್ತೀಚೆಗೆ ಹಾಡಿನ ಚಿತ್ರೀಕರಣವೊಂದಕ್ಕೆ ಅಭಿಷೇಕ್ ಮಲೇಶಿಯಾಗೆ ಹೋಗಿದ್ದರು. ಮಗನ ಜೊತೆ ಸುಮಲತಾ ಕೂಡ ಹೋಗಿದ್ದರು. ಇದೀಗ ಹಾಡಿನ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ನಟ ಹಾಗೂ ಸುಮಲತ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ.  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈಸೂರು ಪೇಟ, ಗಂಧದ ಹಾರ ಹಾಕಿ ಅಮರ್ ಎಂದು ಬರೆದಿರುವ ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ.

ಸೈನಿಕರ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

#abhishekambareesh #sandalwood #kannadamovies #balkaninews #amarmovieshooting

Tags

Related Articles