ಸುದ್ದಿಗಳು

ಕೊಟ್ಟ ಮಾತಿನಂತೆ ಮಂಡ್ಯಕ್ಕೆ ತೆರಳಿ ಟೀ ಕುಡಿದ ಅಭಿಷೇಕ್ ಅಂಬರೀಶ್

ಬೆಂಗಳೂರು, ಏ.20:

ಸದ್ಯ ಅಭಿಷೇಕ್ ಅಂಬರೀಶ್ ಮಂಡ್ಯ ರೌಂಡ್ಸ್ ಹಾಕಿದ್ದಾರೆ. ಅಭಿ ತಮ್ಮ ಅಮ್ಮನ ಪರ ಪ್ರಚಾರಕ್ಕೆ ನಿಂತಿದ್ದರು. ಇನ್ನೂ ಚುನಾವಣೆ ಬಳಿಕವೂ ಮಂಡ್ಯದಲ್ಲಿ, ಮಂಡ್ಯ ಜನರ ಜೊತೆ ಬೆರೆತಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸುಮಲತ ಯಶ್ ದರ್ಶನ್ ಹಾಗೂ ಅಭಿ ಸತತ ಪ್ರಚಾರ ನಡೆಸಿದ್ದರು. ಚುನಾವಣೆ ಬಳಿಕವೂ ಮಂಡ್ಯ ಮಂದಿಯ ಜೊತೆ ಅಭಿ ಟೀ ಕುಡಿದು ಹರಟೆ ಹೊಡೆದಿದ್ದಾರೆ. ಇನ್ನೂ ಇಲ್ಲಿಗೆ ಬಂದು ಟೀ ಕುಡಿಯುವುದಿಕ್ಕೂ ಎರಡು ಬಲವಾದ ಕಾರಣಗಳಿವೆ.

ಕೊಟ್ಟ ಮಾತು ಉಳಿಸಿಕೊಂಡ ಅಭಿ

ಅಭಿ ಚುನಾವಣೆ ಪ್ರಚಾರದಲ್ಲಿ ಟೀ ಅಂಗಡಿಯವರಿಗೆ ಹೇಳಿದ್ದರಂತೆ. ಚುನಾವಣೆ ಬಳಿಕ ಬಂದು ಟೀ ಕುಡಿಯುತ್ತೇನೆ ಅಂತಾ. ಹಾಗಾಗಿ ಬಂದು ಟೀ ಕುಡಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಇದು ಅಭಿ ಚುನಾವಣೆ ಪ್ರಚಾರದಲ್ಲಿಯೇ ಡಿಸೈಡ್ ಮಾಡಿದ್ದ ತೀರ್ಮಾನ. ಇದೀಗ ಟೀ ಕುಡಿಯಲು ಇನ್ನೊಂದು ಬಲವಾದ ಕಾರಣವಿದೆ.

ಸಿಂಗಪೂರ್ ವಿಚಾರಕ್ಕೆ ಅಭಿ ಉತ್ತರ

ಹೌದು, ಚುನಾವಣೆ ಬಳಿಕ ಅಭಿ ಹಾಗೂ ಸುಮಲತ ಸಿಂಗಪೂರ್ ಹಾರುತ್ತಾರೆ ಎಂಬ ವದಂತಿ ಹರಡಿತ್ತು. ಅಷ್ಟೇ ಅಲ್ಲ ಟಿಕೆಟ್ ಒಂದು ಕೂಡ ಹರಿದಾಡಿತ್ತು. ಈ ಟಿಕೆಟ್ ಸುಳ್ಳು ನಾವೆಲ್ಲೂ ಹೋಗಿಲ್ಲ. ನಾವು ಇಲ್ಲೇ ಇದ್ದೇವೆ. ಮಂಡ್ಯದ ಜನರ ಬಳಿಯೇ ಇದ್ದೇವೆ ಅನ್ನೋದನ್ನು ಮಂಡ್ಯದಲ್ಲಿ ಟೀ ಕುಡಿಯುವ ಮೂಲಕ ಟಿಕೆಟ್ ಫೇಕ್ ಮಾಡಿದವರಿಗೆ ಮಾತಿನ ಮೂಲಕ ಬಿಸಿ ಮುಟ್ಟಿಸಿದ್ದಾರೆ ಅಭಿ. ಇದೊಂದು ಸುಳ್ಳು ಸುದ್ದಿ. ಬೇಕಂತಲೇ ಹೀಗೆ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ ಅಭಿ.

ಅಂಬರೀಶ್ ಹುಟ್ಟುಹಬ್ಬಕ್ಕೆ ಒಲವಿನ ಉಡುಗೊರೆಯಾಗಿ ಮೇ 31 ಕ್ಕೆ ಅಮರ್..!!!

#abhishekambareesh #abhishekambareeshmovies #abhishekambareeshhits #abhishekambareeshfacebook

Tags