ಸುದ್ದಿಗಳು

12ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಐಶ್ವರ್ಯ- ಅಭಿಷೇಕ್ ದಂಪತಿ

ಮುಂಬೈ, ಏ.20:

ಬಾಲಿವುಡ್‌ ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಮದುವೆಯಾಗಿ ಇಂದಿಗೆ ಹನ್ನೆರಡು ವರ್ಷ ಕಳೆದಿದೆ. ಬಾಲಿವುಡ್ ಹಾಟ್ ದಂಪತಿ ತಮ್ಮ 12ನೇ ವರ್ಷದ ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ. ಈಗಾಗಲೇ ಸಪ್ತ ಪತಿ ತುಳಿದು ದಾಂಪತ್ಯ ಜೀವನದ 12 ವಸಂತಗಳನ್ನು ಪೂರೈಸಿ, ಇತರ ದಂಪತಿಗಳಿಗೆ ಮಾದರಿಯಾಗಿದೆ ಈ ಜೋಡಿ. ಇದೀಗ ಈ ಸಂಭ್ರಮದ ಕ್ಷಣಗಳನ್ನು ಈ ಜೋಡಿ ಸವಿಯುತ್ತಿದ್ದಾರೆ.

ಜೊತೆಗೆ ಸಿನಿಮಾ ಮಾಡಿದ್ದ ಜೋಡಿ

ಹೌದು, ಢಾಯಿ ಅಕ್ಷರ್ ಪ್ರೇಮ್ ಕೇ, ಕುಚ್ ನಾ ಕಹೋ ಹಾಗೂ ಧೂಮ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಐಶ್ ಹಾಗೂ ಅಭಿಷೇಕ್ ನಂತರ ಅಭಿಮಾನಿಗಳ ಪಾಲಿಗೆ ಸೂಪರ್ ಜೋಡಿ ಎಂದೆನಿಸಿಕೊಂಡರು. ಗುರು ಚಿತ್ರದ ಶೂಟಿಂಗ್ ವೇಳೆ ಅಭಿಷೇಕ್, ಐಶ್‌ ಗೆ ಪ್ರಪೋಸ್ ಮಾಡಿದ್ದರಂತೆ. ಅಂದರೆ ಈ ಜೋಡಿಯ ಪ್ರೀತಿ 2007 ರಲ್ಲಿ ಪ್ರಾರಂಭವಾಗಿತ್ತು. ಈ ಪ್ರೀತಿ ಮದುವೆಗೆ ತಿರುಗಲು ಹೆಚ್ಚು ಕಾಲ ತೆಗೆದುಕೊಂಡಿರಲಿಲ್ಲ. ಪ್ರೀತಿಸುವ ವಿಚಾರವನ್ನು ಮನೆ ಮಂದಿಗೆ ತಿಳಿಸಿದ್ದ ಈ ಜೋಡಿ 2007ರಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯ ಹಸೆಮಣೆ ಏರಿಯೇ ಬಿಟ್ಟಿದ್ದರು.

ಪ್ರೀತಿಯ ಸಂಕೇತ ಆರಾಧ್ಯ

ಅಭಿಮಾನಿಗಳ ದೃಷ್ಟಿ ಬೀಳುವಂತಿರುವ ಈ ದಂಪತಿಗೆ ಮುದ್ದಾದ ಮಗುವಿದೆ. 2011 ರಲ್ಲಿ ಆರಾಧ್ಯ ಇವರ ಪ್ರೀತಿ ಸಂಕೇತವಾಗಿ ಜನಿಸಿದರು. ಸದ್ಯ ಹನ್ನೆರಡನೇ ವರ್ಷದ ವಿವಾಹದ ಖುಷಿಯಲ್ಲಿರುವ ಈ ಜೋಡಿಗೆ ನಮ್ಮ ಬಾಲ್ಕನಿ ಶುಭಹಾರೈಸುತ್ತದೆ.

 

View this post on Instagram

 

❤️Our Togetherness🥰captured by The Divine Light of Our Lives 😍LOVE YOU AARADHYA💖😘

A post shared by AishwaryaRaiBachchan (@aishwaryaraibachchan_arb) on

 

View this post on Instagram

 

Honey and the moon. 😉 . . . @niyamamaldives #niyamamaldives #edge

A post shared by Abhishek Bachchan (@bachchan) on

Related image

#JusticeForMadhu: ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕು ಎಂದ ದರ್ಶನ್

 

#weddinganniversery #abhishekbachchan #aishwaryaraibachchan

Tags