ಸುದ್ದಿಗಳು

‘ಅಮರ್’ ನಂತರ ಅಭಿಷೇಕ್ ಚಿತ್ರವನ್ನು ನಿರ್ದೇಶನ ಮಾಡಲಿರುವ ಗುರುದತ್

ಈಗಾಗಲೇ ಚಿತ್ರಕ್ಕೆ ಸಿದ್ದತೆಗಳು ಸಹ ನಡೆಯುತ್ತಿವೆ

ಬೆಂಗಳೂರು.ಮಾ.15: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಟನೆಯ ಮೊದಲ ಸಿನಿಮಾ ‘ಅಮರ್’ ಬಿಡುಗಡೆ ಸದ್ಯದಲ್ಲಿಯೇ ಆಗಲಿದೆ. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಎರಡನೇ ಮತ್ತೊಂದು ಚಿತ್ರದ ಸಿದ್ದತೆಯೂ ನಡೆಯುತ್ತಿದೆ.

ಹೌದು, ಅಭಿಷೇಕ್ ಈಗ ಎರಡನೇಯ ಚಿತ್ರದ ಸಿದ್ದತೆಯಲ್ಲಿದ್ದಾರೆ. ಈ ಚಿತ್ರವನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ನಿರ್ದೇಶಕ ಗುರುದತ್ ಗಾಣಿಕ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

Image result for abhishek ambareesh

ಇನ್ನು ಗುರುದತ್ ಕನ್ನಡದ ಅತೀ ಕಿರಿಯ ವಯಸ್ಸಿನ ನಿರ್ದೇಶಕ ಎನಿಸಿಕೊಂಡಿದ್ದು ‘ಅಂಬಿ’ ಚಿತ್ರದ ಬಳಿಕ ಯಾವ ಚಿತ್ರ ಮಾಡಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ನಡುವೆ ಅವರು ನೆಕ್ ಪ್ಲಿಕ್ಸ್ ಗಾಗಿ ವೆಬ್ ಸರಣಿಯನ್ನೂ ಸಹ ಮಾಡುತ್ತಿದ್ದಾರೆ.

ಇನ್ನು ಹೆಸರಿಡದ ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದು, ಅಭಿಷೇಕ್ಗೆ ಒಪ್ಪುವಂಥ ಕಥೆಯನ್ನೂ ಸಿದ್ಧ ಮಾಡಿದ್ದಾರಂತೆ ನಿರ್ದೇಶಕರು. ‘ಅಮರ್’ ಸಿನಿಮಾ ಬಿಡುಗಡೆಯ ಬಳಿಕ ಈ ಚಿತ್ರ ಸೆಟ್ಟೇರಲಿದೆ.

ಇನ್ನು ಮೊದಲ ಚಿತ್ರದಲ್ಲಿಯೇ ಅಂಬರೀಶ್ ಮತ್ತು ಸುದೀಪ್ ರಿಗೆ ಆ್ಯಕ್ಷನ್ ಕಟ್ ಹೇಳಿ ಗುರುತಿಸಿಕೊಂಡಿದ್ದ ಗುರುದತ್, ಈಗ ಅಭಿಷೇಕ್ ರ ಚಿತ್ರವನ್ನು ಮಾಡುತ್ತಿರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡುತ್ತಿವೆ. ಆದರೆ ಈ ಬಗ್ಗೆ ನಿರ್ದೇಶಕರು ಹೀಗೆ ಹೇಳುತ್ತಾರೆ.

Image result for Gurudatha Ganiga

“ಸದ್ಯಕ್ಕೆ ನಾನು ಯಾವುದೇ ಸಿನಿಮಾ ಮಾಡುತ್ತಿಲ್ಲ. ಕೆಲವು ನಟರ ಜೊತೆಗೆ ಮಾತುಕತೆ ಆಗಿದ್ದು ನಿಜ. ಇನ್ನೂ ಯಾವುದೂ ಫೈನಲ್ ಆಗಿಲ್ಲ. ಅಂತಿಮವಾಗದೇ ಏನೂ ಹೇಳುವುದಕ್ಕೆ ಆಗುವುದಿಲ್ಲ. ಫೈನಲ್ ಆದ ತಕ್ಷಣ ಎಲ್ಲವನ್ನೂ ಹೇಳುತ್ತೇನೆ. ಸದ್ಯ ನೆಟ್ ಫ್ಲಿಕ್ಸ್ ಗಾಗಿ ವೆಬ್ ಸರಣಿಯನ್ನು ಮಾಡುತ್ತಿದ್ದೇನೆ. ಇದನ್ನು ಸುದೀಪ್ ಮತ್ತು ಇನ್ನೋವೇಟಿವ್ ಫಿಲಂ ಸಿಟಿ ಜಂಟಿಯಾಗಿ ಮಾಡುತ್ತಿದ್ದಾರೆ”.

ಸೈಫ್ ಅಲಿಖಾನ್ ಅವರನ್ನು ಟ್ರೋಲ್ ಮಾಡಿ ಪ್ರಶ್ನಿಸಿದ್ದವರಿಗೆ ಕರೀನಾ ಖಡಕ್ ಉತ್ತರ

#abhishekambareesh, #nextmovie, #balkaninews #amar, #gurudathganiga, #filmnews, #kannadasuddigalu

Tags