ಸುದ್ದಿಗಳು

“…ಅಣ್ಣಾವ್ರ ಅಭಿಮಾನಿ ನಾನು..” :ಅಭಿಷೇಕ್ ಬಚ್ಚನ್!!

ಸ್ವತಃ ನಾನು ಹಾಗೂ ನನ್ನ ತಂದೆಯವರೂ ಡಾ. ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಗಳೇ..!

ಬೆಂಗಳೂರು,ಸೆ.12: ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಅವರು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಬಂದಿರುವ ಕಾರಣ ಇಷ್ಟೆ. ‘ಮನ್ ಮರ್ಜಿಯಾ’ ಹೊಸ ಸಿನಿಮಾ ಮಾಡಿದ್ದು, ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಡಾ|| ರಾಜ್ ಕುಮಾರ್ ರವರನ್ನು ನೆನೆದು ತಂದೆ ಮತ್ತು ಅವರ ನಡುವೆ ಇದ್ದ ಒಡನಾಟದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಡಾ. ರಾಜ್ಕುಮಾರ್ ಅವರ ದೊಡ್ಡ ಫ್ಯಾನ್

ಬಾಲಿವುಡ್ ನ ಹೆಸರಾಂತ ನಟ ಬಿಗ್ ಬಿ ಅವರ ಪುತ್ರ ಅಭಿಷೇಕ್ ಬಚ್ಚನ್ ‘ನನ್ನ ತಂದೆ ಕರುನಾಡ ಚಕ್ರವರ್ತಿ ಡಾ. ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್’ ಎಂದು ಅಣ್ಣಾವ್ರ ಮೇಲೆ ಇರುವ ಅಭಿಮಾನವನ್ನು ಹಂಚಿಕೊಂಡಿದ್ದಾರೆ..

ಸೌತ್ ಸಿನಿಮಾಗಳನ್ನು ನೋಡಿದ್ದೇನೆ

ಸ್ವತಃ ನನ್ನ ತಂದೆಯೇ …”ನಾನು ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್..”,  ಎಂದು ಹೇಳಿಕೊಂಡಿದ್ದರು. ನನ್ನನ್ನು ಒಂದೆರೆಡು ಬಾರಿ ರಾಜ್ ಕುಮಾರ್ ಸರ್ ಅವರೊಡನೆ ಭೇಟಿ ಮಾಡಿಸಿದ್ದರು. ಆಗ ನಾನಿನ್ನು ಚಿಕ್ಕವನು. ಅವರ ನಟನೆ ಎಂದರೆ ತಂದೆಗೆ ತುಂಬಾ ಇಷ್ಟ. ಅವರ ಮಕ್ಕಳು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಂದೆ ಹೇಳಿದ್ದರು. ನಾನು ಸೌತ್ ಸಿನಿಮಾಗಳನ್ನು ನೋಡಿದ್ದೇನೆ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ…, ಅಭಿಷೇಕ್ ಬಚ್ಚನ್!

 

Tags