ಸುದ್ದಿಗಳು

‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಒಪ್ಪಿದ ರಿಷಿ ಕಪೂರ್

ಮುಂಬೈ, ಜ.18: ಡಾ.ಮನ್ ಮೋಹನ್ ಸಿಂಗ್ ಜೀವನ ಚರಿತ್ರೆಯೇ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’. ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೂ ಮುನ್ನವೇ ಬಹಳಷ್ಟು ವಿರೋಧಗಳು ಈ ಸಿನಿಮಾಗೆ ವ್ಯಕ್ತವಾಗಿದ್ದವು, ಅದನ್ನೆಲ್ಲ ಮೆಟ್ಟಿ ನಿಂತು ಇಂದು ಮುನ್ನುಗ್ಗುತ್ತಿದೆ ಈ ಸಿನಿಮಾ.

ಸಿನಿಮಾ ನೋಡಿ ಟ್ವಿಟ್ ಮಾಡಿದ ರಿಷಿ ಕಪೂರ್

ಸಿನಿಮಾ ನೋಡಿದ ಅನೇಕ ಮಂದಿಗೆ ಈ ಸಿನಿಮಾ ಇಷ್ಟವಾಗಿದೆ. ಯಾಕೆಂದರೆ ದೇಶದ ಪ್ರಧಾನಿ ಜೀವನ ಚರಿತ್ರೆ ಸಿನಿಮಾ ಅಂದರೆ ಸುಮ್ಮನೆ ಮಾತಲ್ಲ. ಈಗಾಗಲೇ ಅನೇಕ ಗೊತ್ತಿಲ್ಲದ ವಿಚಾರಗಳು ಕೂಡ ಈ ಸಿನಿಮಾದಿಂದ ಗೊತ್ತಾಗಿದೆ. ಮನಮೋಹನ್ ಸಿಂಗ್ ಅವರ ಇಡೀ ಜೀವನವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಬಯೋಪಿಕ್ ಸಿನಿಮಾ ಆಗಿದ್ದರೂ ಕುತೂಹಲಕಾರಿ ಅಂಶಗಳು ಸಿನಿಮಾದಲ್ಲಿವೆ. ಇದೀಗ ಈ ಸಿನಿಮಾ ನೋಡಿದ ಬಾಲಿವುಡ್ ನಟ, ನಿರ್ದೇಶಕ ರಿಷಿ ಕಪೂರ್ ಸಿನಿಮಾಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಇವರು, ಇದೊಂದು ವಿಭಿನ್ನ ಸಿನಿಮಾ, ಅಷ್ಟೆ ಅಲ್ಲ ವಿಭಿನ್ನ ಪ್ರಯತ್ನ ಇದಾಗಿದೆ. ಹಾಗಾಗಿ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

ಪುಸ್ತಕ ಆಧರಿಸಿದ ಸಿನಿಮಾ

ಸಂಜಯ್ ಬಾರು ಅವರ ಪುಸ್ತಕ ಆಧರಿಸಿ ತಯಾರು ಮಾಡಿರುವವ ಈ ಸಿನಿಮಾಗೆ ವಿಜಯ ರತ್ನಾಕರ ಗುತ್ತೆ ನಿರ್ದೇಶನ ಮಾಡಿದ್ದಾರೆ. ಅನುಪಮ್ ಖೇರ್ ಈ ಸಿನಿಮಾದಲ್ಲಿ ಮನ್ ಮೋಹನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ದಿವ್ಯಾ ಸೇಠ್ ಮತ್ತು ಸುಜೇನ್ ಬರ್ನರ್ಟ್, ಅರ್ಜುನ್ ಮಾಥುರ್, ಆಹನಾ ಕುಮ್ರಾ ಸೇರಿದಂತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ತಾರಾಗಣ ಇರುವ ಈ ಸಿನಿಮಾಗೆ ಮಹರಾಷ್ಟ್ರ ಯೂತ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ವಲಯ ವಿರೋಧ ವ್ಯಕ್ತ ಪಡಿಸಿತ್ತು. ಆದರೆ ಇದೀಗ ಸಿನಿಮಾ ಯಶಸ್ವಿಯತ್ತ ಸಾಗುತ್ತಿದೆ.

#rishikapoor #bollywood #accidentalprimeminister #balkaninews

Tags