ಸುದ್ದಿಗಳು

‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಹಿಂದಿಕ್ಕಿದ ‘ಉರಿ’

ಮುಂಬೈ, ಜ.17: ಬಿಡುಗಡೆಗೂ ಮೊದಲೇ ಬಾರೀ ವಿವಾದ ಉಂಟಾಗಿದ್ದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೂ ಮೊದಲೇ ವಿರೋಧ ಕಟ್ಟಿಕೊಂಡಿದ್ದ ಈ ಸಿನಿಮಾ ಬಿಡುಗಡೆಯಾಗುತ್ತೋ ಇಲ್ಲವೋ ಎಂಬುದು ತಿಳಿದಿರಲಿಲ್ಲ. ಆದರೆ ನಿರೀಕ್ಷೆಯಂತೆ ಈ ಸಿನಿಮಾ ರೀಲೀಸ್ ಕೂಡ ಆಗಿತ್ತು. ಆದ್ರೀಗ ಈ ಸಿನಿಮಾ ಗಳಿಕೆಯಲ್ಲಿ ಮುಗ್ಗರಿಸಿದ್ದು, ಈ ಸಿನಿಮಾವನ್ನು ಹಿಂದಿಕ್ಕಿದೆ ‘ಉರಿ’ ಸಿನಿಮಾ.

‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸೋತಿದೆಲ್ಲಿ..?

ಹೌದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆಯ ಸಿನಿಮಾ ಇದಾಗಿದೆ. ಅವರ ಅಧಿಕಾರದ ದಿನಗಳು, ನಂತರದ ದಿನಗಳು ಹೀಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಇನ್ನು ಅನುಪಮ್ ಖೇರ್ ಕೂಡ ಮನಮೋಹನ್ ಸಿಂಗ್ ಅವರ ಪಾತ್ರವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದ್ಯಾಕೋ ಗೊತ್ತಿಲ್ಲ ಈ ಸಿನಿಮಾ ಗಳಿಕೆಯನ್ನು ‘ಉರಿ’ ಸಿನಿಮಾ ಮುರಿದಿದೆ. ಉರಿ ಸಿನಿಮಾದ ಮುಂದೆ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಮುಗ್ಗರಿಸಿದ್ದಾರೆ.

ಗಳಿಕೆಯಲ್ಲಿ ‘ಉರಿ’ ಮುಂದೆ

ಇನ್ನು ಉರಿ ಸಿನಿಮಾ ಇದಕ್ಕಿಂತ ಒಂದು ಹೆಜ್ಜೆ ಮುಂದಿದೆ. ಸರ್ಜಿಕಲ್ ಸ್ಟ್ರೈಕ್ ಒಂದನ್ನು ಆಧಾರವಾಗಿಟ್ಟುಕೊಂಡು ತೆಗೆದ ಈ ಸಿನಿಮಾಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಅಷ್ಟೆ ಅಲ್ಲ ಈ ಸಿನಿಮಾ ಗಳಿಕೆಯಲ್ಲೂ ನಿರೀಕ್ಷೆ ಮೀರಿದೆ ಎನ್ನಲಾಗುತ್ತಿದ್ದು,  ಉರಿ ಚಿತ್ರದ ನಿರ್ದೇಶಕರು ಅಚ್ಚುಕಟ್ಟಾಗಿ ಎಳೆ ಎಳೆಯಾಗಿ ಪ್ರೇಕ್ಷಕರ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ.

Image result for uri hindi movie

#urihindimovie #bollywood accidentalprimeminister #bollywood #balkaninews

Tags