ಸುದ್ದಿಗಳು

ನಟ ಮತ್ತು ಸಿಸಿಎಲ್ ಆಟಗಾರ ರಾಜೀವ್ ಗೆ ಕೂಡಿ ಬಂತು ಕಂಕಣ ಭಾಗ್ಯ

ಬೆಂಗಳೂರು, ಫೆ.14:

ರಾಜೀವ್. ಇವರನ್ನು ನೀವು ಸಿಸಿಎಲ್ ನ ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರ ರಾಜೀವ್ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುವುದನ್ನು ನೀವು ನೋಡಿರುತ್ತೀರಿ. ಅದಲ್ಲದೇ ಇವರು ಕೆಲವು ಸಿನಿಮಾಗಳ ಮೂಲಕವು ಚಿರಪರಿಚಿತರಾಗಿದ್ದರು. ‘ಕೆಂಪೇಗೌಡ’, ‘ಆರ್ ಎಕ್ಸ್ 100’, ‘ಬೆಂಗಳೂರು 560023’, ಇನ್ನೂ ಮುಂತಾದ ಚಿತ್ರಗಳಲ್ಲಿ ನಟಿಸಿ ಗಮನಸೆಳೆದಿದ್ದಾರೆ.

ರಾಜೀವ್ ಕಿಚ್ಚ ಸುದೀಪ್ ರವರ ಆಪ್ತ ಸ್ನೇಹಿತ. ಕಿಚ್ಚ ಸುದೀಪ್ ರವರ ಯಾವುದೇ ಕಾರ್ಯಕ್ರಮಗಳಿದ್ದರೂ ಅವರ ಜೊತೆ ಇದ್ದು ಸಹಕರಿಸುತ್ತಾರೆ. ಅಷ್ಟರ ಮಟ್ಟಿಗೆ ಸುದೀಪ್ ರವರ ಜೊತೆ ಸ್ನೇಹ ಭಾಂದವ್ಯವನ್ನು ಹೊಂದಿದ್ದಾರೆ.

ಇತ್ತೀಚೆಗಷ್ಟೇ ರಾಜೀವ್ ತಮ್ಮ ಗೆಳತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಹಲವಾರು ಕಲಾವಿದರು, ಮತ್ತು ಪ್ರಿಯಾ  ಸುದೀಪ್ ಆಗಮಿಸಿ ಶುಭಕೋರಿದ್ದರು. ಇದೀಗ ಹೊಸ ವಿಷಯವೇನೆಂದರೆ, ರಾಜೀವ್ ರವರು ಇದೇ ಫೆಬ್ರವರಿ 15ರಂದು ರೇಷ್ಮಾರವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಇವರ ವಿವಾಹವು ಇಲಾನ್ ಕನ್ವೇಷನ್ ಸೆಂಟರ್, ಜೆ ಪಿ ನಗರದಲ್ಲಿ ಕುಟುಂಬದವರ ಸಮ್ಮುಖದಲ್ಲಿ ನಡೆಯಲಿದೆ.

‘ಕರ್ವ’ ಚಿತ್ರದ ನಾಯಕಿಯ ಜೊತೆ ಕ್ರಿಕೆಟರ್ ಎನ್ ಸಿ ಅಯ್ಯಪ್ಪ ಮದುವೆ

#rajeev #actorrajeevhanu #sandalwood #kannadaactors #rajeevhanufacebook #rajeevmovies #rajeevengagement

Tags