ಸುದ್ದಿಗಳು

ಧಾರಾವಾಹಿಯೊಂದಿಗೆ ಕಿರುಚಿತ್ರದಲ್ಲೂ ಅನಿರುದ್ದ್ ದಾಖಲೆ

ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಟಿ.ಆರ್‌.ಪಿಯಲ್ಲಿ ಇತಿಹಾಸ ಸೃಷ್ಟಿಸಿ ದಾಖಲೆ ಬರೆದಿದೆ. ಈಗ ಇದರ ಹೀರೋ ರಿಯಲ್ ಲೈಫ್‌ ನಲ್ಲಿಯೂ ಸಹ ದಾಖಲೆ ಮಾಡಿದ್ದಾರೆ.

ಅನಿರುದ್ಧ್ ಇತ್ತೀಚೆಗೆ ಕಿರುಚಿತ್ರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಆ ಕಿರುಚಿತ್ರಗಳು ಈಗ ದಾಖಲೆ ಪ್ರಶಸ್ತಿ ಗಳಿಸಿದೆ. 5ಪ್ರಶಸ್ತಿ ಬಾಚಿಕೊಂಡಿರುವ ಅವರ ಕಿರುಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸನಲ್ಲಿ ಟಾಪ್ 100 ಸ್ಥಾನ ದೊರಕಿಸಿಕೊಟ್ಟಿದೆ. ಕಲಾಂ ಬುಕ್ ಆಫ್ ರೆಕಾರ್ಡ್ಸನಲ್ಲೂ 5 ಪ್ರಶಸ್ತಿ ಪಡೆದಿರುವ ಅನಿರುದ್ಧ್, ಕಲಾಮ್ಸ್ ಗೋಲ್ಡನ್ ಅವಾರ್ಡ್ ಕೂಡಾ ಪಡೆದಿದ್ದಾರೆ.


ಇದಿಷ್ಟೇ ಅಲ್ಲದೇ ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ 4  ಪ್ರಶಸ್ತಿ ಪಡೆದಿರುವ ಅನಿರುದ್ದ, ಗ್ರ್ಯಾಂಡೆಡ್ ಮಾಸ್ಟರ್ ಪ್ರಶಸ್ತಿ ಪಡೆದಿದ್ದಾರೆ. ವಿಶೇಷವೆಂದರೆ ಈ ಎಲ್ಲಾ ಕಿರುಚಿತ್ರಗಳ ಕಥೆಯನ್ನು ರಚಿಸಿ ಅವರೇ ನಿರ್ದೇಶಿಸಿದ್ದಾರೆ. ಅಂದ ಹಾಗೆ ಈ ಎಲ್ಲಾ 6 ಕಿರುಚಿತ್ರಗಳನ್ನು ಅವರು 2018ರಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನವಾದ ಸೆ. 18ರಂದು ಬಿಡುಗಡೆ ಮಾಡಿದ್ದರು.

‘ಶಿವಲಿಂಗ’ ಬ್ಯೂಟಿಯ ಗ್ಲಾಮರಸ್ ಫೋಟೋಶೂಟ್

#Anrirudh #AnrirudhMovie #JotheJotheyali #AnrirudhShortMovies #kannadaSuddigalu

Tags