ಸುದ್ದಿಗಳು

ಗುರು ಯೋಧನ ಕುಟುಂಬಕ್ಕೆ ‘ರಾಂಧವ’ ಸಾಥ್

ಬೆಂಗಳೂರು, ಫೆ.19:

ಪುಲ್ವಾಮ ದುರಂತ ಎಂದೂ ಮರೆಯದ ಗಾಯ. ಈಗಾಗಲೇ ಇಡೀ ದೇಶವೇ ಯೋಧರ ಸಾವಿಗೆ ಕಣ್ಣೀರು ಹಾಕುತ್ತಿದೆ. ಅಷ್ಟೇ ಅಲ್ಲ ಪಾಕಿಸ್ತಾನ ಮಾಡಿದ ಕೃತ್ಯಕ್ಕೆ ತಕ್ಕ ಪಾಠ ಕಲಿಸಲೇ ಬೇಕು ಎಂಬ ಕೂಗು ಯೋಧರು ಮರಣ ಹೊಂದಿದಾಗಿನಿಂದಲೂ ಕೇಳಿಸುತ್ತಿದೆ. ಇದೀಗ ‘ರಾಂಧವ’ ಸಿನಿಮಾದ ನಾಯಕ ಹಾಗೂ ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಯೋಧರಿಗೆ ನಮನ ಸಲ್ಲಿಸುವುದರ ಜೊತೆಗೆ ಕುಟುಂಬಕ್ಕೆ ಧನ ಸಹಾಯ ಮಾಡಿದ್ದಾರೆ.

ಗುರು ಕುಟುಂಬಕ್ಕೆ ರಾಂಧವ ಸಾಂತ್ವಾನ

ಹೌದು, ಈ ಬಾಂಬ್ ದುರಂತದಲ್ಲಿ ಮಂಡ್ಯ ಯೋಧ ಗುರು ಕೂಡ ಒಬ್ಬರು. ಈ ಯೋಧ ಕೂಡ ಈ ಭೀಕರ ದುರಂತದಲ್ಲಿ ಸಾವನ್ನಪ್ಪಿದ್ದರು. ಇದೀಗ ಈ ಯೋಧನ ಸಾವಿಗೆ ಇಡೀ ಕರ್ನಾಟಕ ದುಖಃ ತಪ್ತವಾಗಿದ್ದು, ಇಡೀ ರಾಜ್ಯವೇ ಸಾಂತ್ವಾನ ಹೇಳುತ್ತಿದೆ. ‘ಬೆಲ್ ಬಾಟಮ್’ ಸಿನಿಮಾ ತಂಡ ಈ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವಾನ ಹೇಳಿತ್ತು. ಇದೀಗ  ಭುವನ್ ಕೂಡ ಸಾಂತ್ವಾನ ಹೇಳಿದ್ದಾರೆ.

ಒಂದು ಲಕ್ಷ ನೀಡಿದ ರಾಂಧವ

ಹೌದು, ಭುವನ್ ಪೊನ್ನಣ್ಣ  ಗುರು ಕುಟುಂಬವನ್ನು ಭೇಟಿ ಮಾಡಿದ್ದಾರೆ. ಭುವನ್ ಸೇರಿದಂತೆ ಹಲವು ಮಂದಿ ಈ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಧೈರ್ಯ ತುಂಬಿದರು. ಇದರ ಜೊತೆಗೆ ಕುಟುಂಬಕ್ಕೆ ಅನುಕೂಲವಾಗಲಿ ಅಂತಾ ಒಂದು ಲಕ್ಷ ಹಣದ ಚೆಕ್ ಅನ್ನು ನೀಡಿದರು.

‘ಡಿ-55’ ಸಿನಿಮಾ ಬಗ್ಗೆ ಉಂಟಾಗುತ್ತಿರುವ ಗೊಂದಲಗಳು..!!!

#sandalwood #kannadamovies #balkaninews #bhuvanponnanna #randhavakannadamovie #mandyasoldierhgurufamily

Tags

Related Articles