ಸುದ್ದಿಗಳು

ಸುಲ್ತಾನ್ ಸಂಭ್ರಮ: ಹುಟ್ಟುಹಬ್ಬದ ವಿಚಾರದಲ್ಲಿ ಸಂದೇಶ ನೀಡಿದ ಚಾಲೆಂಜಿಂಗ್ ಸ್ಟಾರ್

ನಟ ದರ್ಶನ್ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು, ಅದೇ ರೀತಿ ಅವರಿಗೂ ಅವರ ಅಭಿಮಾನಿಗಳು ಎಂದರೆ ಬಹಳ ಪ್ರೀತಿ. ವಿಶೇಷವೆಂದರೆ ಬರುವ ಫೆಬ್ರವರಿ 16 ರಂದು ದರ್ಶನ್ ಜನ್ಮದಿನ. ಹೀಗಾಗಿ ಒಂದು ತಿಂಗಳ ಮುಂಚೆಯೇ ಅಭಿಮಾನಿಗಳು ‘ಸುಲ್ತಾನ್ ಸಂಭ್ರಮ’ ಹೆಸರಿನಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಅಂದ ಹಾಗೆ ದರ್ಶನ್ ಮಾತ್ರ ಇತ್ತಿಚೆಗಿನ ಕೆಲವು ವರ್ಷಗಳಿಂದ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಅದು ಮುಂದುವರಿಯಲಿದೆ ಎಂದು ಅವರೇ  ಹೇಳಿದ್ದಾರೆ.  ಈ ಬಾರಿ ತಮ್ಮ ಅಭಿಮಾನಿಗಳಿಗೆ ಹಾರ, ಕೇಕ್ ಬದಲು ಅಕ್ಕಿ ,ಬೇಳೆ, ದವಸ ಧಾನ್ಯ ತನ್ನಿ ಎಂದು ತಿಳಿಸಿದ್ದಾರೆ.

ಇಂದಿನಿಂದ ದರ್ಶನ್ ಜನ್ಮದಿನಕ್ಕೆ 30 ದಿನಗಳು ಬಾಕಿಯಿದೆ. ಇನ್ನು ದರ್ಶನ್ ‘ರಾಬರ್ಟ್’ ಮತ್ತು ‘ಗಂಡುಗಲಿ ಮದಕರಿ ನಾಯಕ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವ ಮೂಲಕ ತಾವು ಸಿಂಪಲ್ ಎಂದು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.

ಕೋಟಿಗೊಬ್ಬ- 3 ಚಿತ್ರದಲ್ಲಿ ಆಶಿಕಾ ರಂಗನಾಥ್..!!

#Darshan #DarshanBirthday #SultanSambrama #KannadaSuddigalu

Tags