ಸುದ್ದಿಗಳು

ಗೋ ಶಾಲೆಗೆ 15 ಲೋಡ್ ಮೇವು ಸಹಾಯ ಮಾಡಿದ ಡಿ ಬಾಸ್: ವಿಡಿಯೋ ವೈರಲ್

ನಟ ದರ್ಶನ್ ಗೆ ಅಭಿಮಾನಿಗಳನ್ನು ಕಂಡರೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿ ಮತ್ತು ಅಭಿಮಾನ ಪ್ರಾಣಿ-ಪಕ್ಷಿಗಳ ಮೇಲೆಯೂ ಸಹ ಇದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ . ವಿಶೇಷವೆಂದರೆ ಇವರೀಗ ಮಂಡ್ಯ ಭಾಗದ ಗೋ ಶಾಲೆಗಯ ಹಸುಗಳಿಗೆ ಎಂದು 15 ಲೋಡ್ ಮೇವು ಸಹಾಯ ಮಾಡಿದ್ದಾರೆ.

ಹೌದು, ಈ ಬಾರಿ ಮಂಡ್ಯ ಭಾಗದ ರೈತರು ಬರದಿಂದ ಕಂಗೆಟ್ಟಿದ್ದಾರೆ. ಅತ್ತ ಗೋಶಾಲೆಗಳಲ್ಲಿರುವ ಹಸುಗಳಿಗೂ ಮೇವಿನ ಸಮಸ್ಯೆ ತಲೆದೂರಿದೆ. ಈ ವಿಷಯ ದರ್ಶನ್ ರಿಗೆ ಗೊತ್ತಾಗಿದ್ದೇ ತಡ, ಆ ಭಾಗದ ದೊಡ್ಡ ಬ್ಯಾಡರ ಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ್ದಾರೆ. ಅಲ್ಲದೆ ಅಲ್ಲಿನ ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್ ಗಳಷ್ಟು  ಮೇವು ದಾನ ಮಾಡಿ ತಮ್ಮ ಪ್ರಾಣಿ ಪ್ರೀತಿಯನ್ನು ಮರೆದಿದ್ದಾರೆ.

ಇನ್ನು ದರ್ಶನ್ ಭೇಟಿ ನೀಡಿರುವ ಫೋಟೋ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಸಾಗುತ್ತಿರುವ ಹುಲ್ಲಿನ ರಾಶಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಹಾಗೆಯೇ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, ಹಾಗೆಯೇ ಕೇಕ್ , ಹಾರ, ತುರಾಯಿಗಳ ಬದಲಾಗಿ ದವಸ ಧಾನ್ಯಗಳನ್ನು ತನ್ನಿ, ಅವುಗಳನ್ನು ಒಂದು ಕಡೆ ಸೇರಿಸಿ ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುತ್ತೇವೆ ಎಂದು ವಿನಂತಿಸಿಕೊಂಡಿದ್ದಾರೆ.

ಜನ್ಮದಿನದ ಸಂಭ್ರಮದಲ್ಲಿ ಬ್ಲಾಕ್ ಕೋಬ್ರಾ ‘ದುನಿಯಾ’ ವಿಜಯ್

#Darshan #DarshanHelps #DarshanFans #KannadaSuddigalu #KannadaMovies

Tags