ಸುದ್ದಿಗಳು

ಕುದುರೆ ಏರಿ ಸವಾರಿ ಮಾಡಿದ ‘ಸುಯೋಧನ’ ದರ್ಶನ್

ನಟ ಡಿ-ಬಾಸ್ ದರ್ಶನ್ ಅವರ ಪ್ರಾಣಿ ಪ್ರೀತಿ ಎಲ್ಲರಿಗೂ ತಿಳಿದಿರುವ ವಿಚಾರ. ಅವರ ಪ್ರಾಣಿ ಪ್ರೀತಿಯ “ದರ್ಶನ” ಆಗಾಗ ಆಗುತ್ತಲೇ ಇರುತ್ತದೆ. ಇದಕ್ಕೆ ಬೆಸ್ಟ್ ಉದಾಹರಣೆ ಅಂದರೆ ಮಂಡ್ಯ ಲೋಕಸಭಾ ಉಪಚುನಾವಣೆ ವೇಳೆ ಆನೆಯಂಥಾ ಎತ್ತನ್ನು ಬರೀ ಎಡಗೈಯಲ್ಲಿ ತಟ್ಟಿ ಮದವಿಳಿಸಿದ್ದು!!

ಅಂದ ಹಾಗೆ ದರ್ಶನ್ ಸದ್ಯ ‘ಕುರುಕ್ಷೇತ್ರ’ ಚಿತ್ರದ ಭರ್ಜರಿ ಯಶಸ್ಸಿನಲ್ಲಿ ಓಡಾಡುತ್ತಿದ್ದಾರೆ. ಹಾಗೆಯೇ ಮೈಸೂರಿನಲ್ಲಿ ಗೆಳೆಯರೊಂದಿಗೆ ಸೇರಿಕೊಂಡು, ಕುದುರೆ ಏರಿ ರಸ್ತೆಯಲ್ಲಿ ಓಡಾಡಿದ್ದಾರೆ.

ದರ್ಶನ್ ಗೆ ಇಷ್ಟವಾದ ಕುದುರೆ ಗಜೇಂದ್ರ. ಈ ಗಜೇಂದ್ರ ಇತ್ತೀಚಿಗಷ್ಟೆ ದರ್ಶನ್ ಫಾರ್ಮ್ ಹೌಸ್ ಸೇರಿದೆ. ಈ ಬಿಳಿ ಬಣ್ಣದ ಗಜೇಂದ್ರನನ್ನು ಮಹಾರಾಷ್ಟ್ರದಿಂದ ಖರೀದಿಸಿದ್ದಾರೆ. ಇದೇ ಕುದುರೆ ಏರಿ ಅವರು ಓಡಾಡಿ ಕಾಲ ಕಳೆದಿದ್ದಾರೆ. ಇನ್ನು ಈ ಕುದುರೆಯ ಹಿಂದಕ್ಕೆ ಇನ್ನೊಂದು ಕಪ್ಪು ಬಣ್ಣದ ಕುದುರೆಯನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ.


ದರ್ಶನ್ ಅವರ ಜೊತೆ ಅವರ ಇನ್ನಿಬ್ಬರು ಸ್ನೇಹಿತರು ಕುದುರೆ ಸವಾರಿ ಮಾಡುತ್ತಿರುವುದು ಕಂಡ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದ್ದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ದರ್ಶನ್ ರ ‘ಒಡೆಯ’ ಸಿನಿಮಾ ರಿಲೀಸ್ ಗೆ ಸಜ್ಜಾಗುತ್ತಿದೆ. ಜೊತೆಗೆ ‘ರಾಬರ್ಟ್’ ಚಿತ್ರದ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಈ ವರ್ಷದ ಸೂಪರ್ ಹಿಟ್ ‘ಮಹರ್ಷಿ’ ಚಿತ್ರದ ಡಿಲೀಟೆಡ್ ಸೀನ್ ಗಳು ಇಲ್ಲಿವೆ ನೋಡಿ

#ActorDarshan #kurukshatra, #DarshanHorseRidding #sandalwoodmovies  ‍#kannadasuddigalu

Tags