ಸುದ್ದಿಗಳು

ಸೆಲೆಬ್ರಿಟಿ ಮತ್ತು ಸ್ನೇಹಿತರಿಗೆ ಥ್ಯಾಂಕ್ಸ್ ಹೇಳಿದ ಡಿ-ಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಕಂಡರೆ ಜನರಿಗೆ ಬಹಳ ಪ್ರೀತಿ. ಅದರಂತೆ ದರ್ಶನ್ ಸಹ ತಮ್ಮ ಅಭಿಮಾನಿ ಮತ್ತು ಸ್ನೇಹಿತರನ್ನು ಬಹಳ ಇಷ್ಟಪಡುತ್ತಾರೆ. ಅಂದ ಹಾಗೆ ಕಳೆದ ವರ್ಷ ಅವರು ನಟಿಸಿರುವ ಯಾವ ಸಿನಿಮಾಗಳು ಸಹ ತೆರೆಯ ಮೇಲೆ ಬಂದಿರಲಿಲ್ಲ. ವಿಶೇಷವೆಂಬಂತೆ ಈ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳು ರಿಲೀಸ್ ಆದವು.

ಹೌದು, ವರ್ಷದ ಆರಂಭದಲ್ಲಿ ದರ್ಶನ್ ನಟನೆಯ ‘ಯಜಮಾನ’ ನಂತರ ‘ಕುರುಕ್ಷೇತ್ರ’ ಚಿತ್ರಗಳು ತೆರೆ ಕಂಡು ಶತದಿನವನ್ನು ಪೂರೈಸುವುದರೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದ್ದವು. ಇದೀಗ ‘ಒಡೆಯ’ ತೆರೆ ಕಂಡಿದ್ದು, ಪ್ರೇಕ್ಷಕರ ಮನ ಸೆಳೆಯುತ್ತಿದೆ.

ಈ ವರ್ಷ ಮೂರು ಸಿನಿಮಾಗಳು ತೆರೆ ಕಂಡಿದ್ದಕ್ಕೆ ಮತ್ತು ಜನರು ನೋಡಿ ಆಶೀರ್ವಾದ ಮಾಡಿದ್ದಕ್ಕೆ ಸ್ವತಃ ದರ್ಶನ್ ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳಿಗೆ ಹೀಗೆ ಧನ್ಯವಾದ ತಿಳಿಸಿದ್ದಾರೆ.

‘ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ ತಾಳ್ಮೆಯಿಂದ ಕಾದು ಈ ವರ್ಷ ಬಿಡುಗಡೆಯಾದ 3 ಚಿತ್ರಗಳಿಗೂ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ಧನ್ಯವಾದಗಳು ಮನೆಮಂದಿಯೆಲ್ಲರ ಜೊತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ, ಶುಭ ಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ಸದಾ ಚಿರಋಣಿ. ನಿಮ್ಮ ದಾಸ ದರ್ಶನ್’

ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕಿಚ್ಚ ಸದೀಪ್ !

#Darshan #DarshanTweet  #Odeya #Kurukshetra  #Yajamana ‍#KannadaSuddigalu

Tags