ಸುದ್ದಿಗಳು

ಹಳೆಯ ದಿನಗಳನ್ನು ಮೆಲುಕು ಹಾಕಿದ ‘ಡಾಲಿ’ ಧನಂಜಯ್

‘ಡೈರಕ್ಟರ್ ಸ್ಪೇಷಲ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಟ ಧನಂಜಯ್ ಬಂದಿದ್ದರಾದರೂ ಅವರಿಗೆ ಕಮರ್ಶಿಯಲ್ ಆಗಿ ಹೆಸರು ತಂದು ಕೊಟ್ಟಿದ್ದು ‘ಟಗರು’ ಚಿತ್ರದ ಡಾಲಿ ಪಾತ್ರ

ಬೆಂಗಳೂರು, ಆ.12: “ಚಿತ್ರರಂಗಕ್ಕೆ ಬರುವಾಗ ಅಭಿನಯಿಸಲು ಅವಕಾಶಗಳಿಲ್ಲದೇ ಪ್ರತಿ ದಿನ ಜಾಹೀರಾತುಗಳು ಪಾಂಪ್ಲೆಟ್ಸ್ ಹಂಚುತ್ತಿದ್ದೆ” ಎಂದು ನಟ ಡಾಲಿ ಧನಂಜಯ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಖಾಸಗಿ ವಾಹಿನಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಧನಂಜಯ್, ಅವರು, ತಮ್ಮ ಕರುಣಾಜನಕ ಕಥೆಯನ್ನು ಹಂಚಿಕೊಂಡಿದ್ದಾರೆ. ಜಯನಗರದಲ್ಲಿ ವಾಸವಾಗಿದ್ದ ಅವರಿಗೆ ಈ ನಟರಾಗುವ ಮುನ್ನ ಯಾವುದೇ ಅವಕಾಶ ಸಿಕ್ಕಿರಲಿಲ್ವಂತೆ. ಈ ವೇಳೆ ಅವರು ಪ್ರತಿ ದಿನ ಜಾಹೀರಾತುಗಳು ಪಾಂಪ್ಲೆಟ್ಸ್ ಹಂಚಲು ಹೋಗುತ್ತಿದ್ದರು. ಇದಕ್ಕೆ ಅವರು ಪಡೆಯುತ್ತಿದ್ದ ಸಂಬಳ 100 ರೂ. ದಿನ ಕೈಯಲ್ಲಿ ಬಿಡಿಗಾಸು ಇರಲಿಲ್ವಂತೆ. ಈ ವೇಳೆ ಚಿತ್ರವೊಂದಕ್ಕೆ ವಾಯ್ಸ್ ಡಬ್​ ಗೆ ಅವಕಾಶ ಬಂದಿದ್ದು, ಅದರಲ್ಲಿ 1200 ರೂ. ಸಂಭಾವನೆ ಪಡೆದಿದ್ದಾರೆ. ಹೀಗೆ ಅವರು ಅನುಭವಿಸಿದ ಘಟನೆಗಳನ್ನು ಹೇಳಿದ್ದಾರೆ.

ಚಿತ್ರರಂಗಕ್ಕೂ ಬರುವ ಮುಂಚೆ ಧನಂಜಯ್, ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮೂಲತಃ ಅವರಿಗೆ ನಟರಾಗುವ ಯಾವುದೇ ಬಯಕೆ ಇರಲಿಲ್ಲವಂತೆ. ಆದರೆ ಅವಕಾಶ ಅರಸಿ ಬೆಂಗಳೂರಿಗೆ ಬಂದಿದ್ದ ಅವರಿಗೆ ಸಾಕಷ್ಟು ಕಷ್ಟಗಳು ಎದುರಾಗಿದ್ದವು. ಈ ಬಗ್ಗೆ ಅವರೇ ಈ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

 

ಸಿನಿಮಾದಲ್ಲಿ ನಟಿಸುವ ಮುನ್ನ ‘ಜಯನಗರ ಪೋರ್ಥಬ್ಲಾಕ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು ಧನಂಜಯ್. ಇದು ಅವರದೇ ಕಥೆಯಾಗಿರುವುದು ವಿಶೇಷ. ನಟಿಸಿದ ಮೊದಲ ಚಿತ್ರವು ಕಮರ್ಶಿಯಲ್ ಆಗಿ ಯಶಸ್ಸು ಕಾಣಲಿಲ್ಲ. ಆದರೆ ಅವರ ಎರಡನೇ ಚಿತ್ರ ‘ರಾಟೆ’ ಯ ಮೇಲೆ ನಿರೀಕ್ಷೆಗಳು ಹುಟ್ಟಿದ್ದವು. ಆದರೆ ದುರಾದೃಷ್ಟವೋ ಏನೋ ಅವರು ಅಭಿನಯಿಸಿದ ‘ಬದ್ಮಾಶ’,’ಜೆಸ್ಸಿ’, ಬಾಕ್ಸರ್’, ‘ಅಲ್ಲಮ’ ಚಿತ್ರಗಳು ಸೋಲನ್ನಪ್ಪಿದ್ದವು. ಇದೀಗ ‘ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ಗೆದ್ದು, ಪರಾಭಾಷಾ ಚಿತ್ರರಂಗದಲ್ಲಿಯೂ ಅವಕಾಶಗಳನ್ನು ಪಡೆದಿದ್ದಾರೆ.

Tags