ಸುದ್ದಿಗಳು

ಸಾವನ್ನಪ್ಪಿದ ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಡಿ-ಬಾಸ್ ದರ್ಶನ್

ನಟ ದರ್ಶನ್ ರನ್ನು ಕಂಡರೆ ಎಲ್ಲರಿಗೂ ಇಷ್ಟ ಅದರಲ್ಲೂ ಅವರ ಅಭಿಮಾನಿಗಳು ಅವರನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಅದೇ ರೀತಿ ದರ್ಶನ್ ಸಹ ತಮ್ಮ ಅಭಿಮಾನಿಗಳ ಅಭಿಮಾನವನ್ನು ಆರಾಧಿಸುತ್ತಾರೆ.

ಅಂದ ಹಾಗೆ ದರ್ಶನ್ ಬರೀ ನಟನೆ ಮಾತ್ರವಲ್ಲಾ ವಯಕ್ತಿಕ ಜೀವನದಲ್ಲೂ ಕರುಣಾಮಯಿ. ಯಾರಾದರೂ ಕಷ್ಟ ಅಂತ ಬಂದರೆ ಸಹಾಯ ಮಾಡುತ್ತಾರೆ. ಈಗಾಗಲೇ ಅನೇಕರಿಗೆ ಸಹಾಯ ಮಾಡಿದ್ದಾರೆ. ಇದೀಗ ಅವರು ಕಷ್ಟದಲ್ಲಿರುವ ತಮ್ಮ ಅಭಿಮಾನಿಯ ಕುಟುಂಬಕ್ಕೆ ನೆರವಾಗಿದ್ದಾರೆ.

ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದಂದು ವಿಶ್ ಮಾಡಲು ರಾಕೇಶ್ ಎಂಬ ಅಭಿಮಾನಿ ಶುಭ ಹಾರೈಸಲು ಬಂದಿದ್ದರು. ಹೀಗೆ ಹಾರೈಸಿ ಮನೆಗೆ ವಾಪಾಸು ತೆರಳುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಆಗ ರಾಕೇಶ್ ಕುಟುಂಬದವರಿಗೆ ದಚ್ಚು, ಎರಡು ಲಕ್ಷ ರೂಪಾಯಿ ಧನಸಹಾಯ ಮಾಡಿದ್ದರು. ಮುಂದೆಯೂ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಭರವಸೆ ನೀಡಿದ್ದರು.

ಅದೇ ರೀತಿ ಈ ಬಾರಿ ತಮ್ಮ ಮಗನ ಹುಟ್ಟುಹಬ್ಬಕ್ಕೆ ರಾಕೇಶ್ ಅವರ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲದೇ ಅಗಲಿದ ಈ ಅಭಿಮಾನಿಯ ಸಹೋದರಿಯರಾದ ಕೀರ್ತನಾ, ನಾಗವೇಣಿ ಅವರುಗಳ ಮದುವೆಯ ಖರ್ಚನ್ನು ತಾವೇ ವಹಿಸಿಕೊಂಡಿದ್ದಾರೆ. ಈ ಕುರಿತು ರಾಕೇಶ್ ಅಪ್ಪ ನರಸಿಂಹಯ್ಯ, ತಾಯಿ ಗಂಗಮ್ಮ ಅವರ ಬಳಿ ಭರವಸೆ ನೀಡಿದ್ದಾರೆ. ಹೀಗಾಗಿ ದರ್ಶನ್ ಮಾನವೀಯತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಕಷ್ಟದಿಂದ ಹೊರಬರುತ್ತಾರಾ ಪಾಯಲ್?

#Drashan #DrashanThoogudeepa  #DarshanHelps #DarshanFan #kannadaSuddigalu

Tags